ರಾಜ್ ಕೋಟ್ ಬಿಸಿಲಿಗೆ ಸುಸ್ತಾದ ಆಸ್ಟ್ರೇಲಿಯಾ ಕ್ರಿಕೆಟಿಗರು
ಆಸೀಸ್ ನಿನ್ನೆ ಮೊದಲು ಬ್ಯಾಟಿಂಗ್ ಮಾಡಿ ರನ್ ಹೊಳೆಯನ್ನೇ ಹರಿಸಿತ್ತು. ಆದರೆ ಬ್ಯಾಟಿಗ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್ ಬಿಸಿಲಿನ ಝಳ ತಡೆಯಲಾರದೇ ಐಸ್ ಪ್ಯಾಕ್ ನ ಮೊರೆ ಹೋದರು.
ಮೈದಾನದಲ್ಲೇ ಕುರ್ಚಿ ಮೇಲೆ ಕೂತ ಸ್ಟೀವ್ ಸ್ಮಿತ್ ಗೆ ತಂಡದ ಸಹಾಯಕ ಸಿಬ್ಬಂದಿಗೆ ಐಸ್ ಪ್ಯಾಕ್ ನ ನೆರವು ನೀಡಿದರು. ಕ್ರಿಕೆಟಿಗರು ಪದೇ ಪದೇ ನೀರು ಕುಡಿದು ಡಿಹೈಡ್ರೇಷನ್ ಆಗದಂತೆ ನೋಡಿಕೊಂಡರು.