ಬಾಬರ್ ಅಜಮ್ ಹೊಟ್ಟೆ ನೋಡಿ, ಕೊಹ್ಲಿ ಜೊತೆ ಕಂಪೇರ್ ಮಾಡೋ ಯೋಗ್ಯತೆ ಇದ್ಯಾ ಅಂದ ಫ್ಯಾನ್ಸ್

Krishnaveni K

ಸೋಮವಾರ, 22 ಜುಲೈ 2024 (10:57 IST)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ರ ಡೊಳ್ಳು ಹೊಟ್ಟೆಯ ಫೋಟೋವೊಂದು ವೈರಲ್ ಆಗಿದ್ದು, ನಿಮಗೆ ಕೊಹ್ಲಿ ಜೊತೆ ಹೋಲಿಕೆ ಮಾಡುವ ಯೋಗ್ಯತೆಯಿದೆಯಾ ಎಂದು ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.

ಬಾಬರ್ ಅಜಮ್ ರನ್ನು ಪಾಕಿಸ್ತಾನದ ಕೊಹ್ಲಿ ಎಂದು ಕರೆಯುವವರಿದ್ದಾರೆ. ಮತ್ತೆ ಕೆಲವರು ಕೊಹ್ಲಿಗಿಂತಲೂ ಬಾಬರ್ ಬ್ಯಾಟಿಂಗ್ ನಲ್ಲಿ ಬೆಸ್ಟ್ ಎನ್ನುವವರಿದ್ದಾರೆ. ಆದರೆ ಬಾಬರ್ ಕೆಲವೊಮ್ಮೆ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದು ಬಿಟ್ಟರೆ ಅವರು ಕೊಹ್ಲಿಯ ಸನಿಹ ಸುಳಿಯಲೂ ಸಾಧ್ಯವಾಗಿಲ್ಲ.

ಅದರಲ್ಲೂ ಇತ್ತೀಚೆಗೆ ಬಾಬರ್ ಅಭ್ಯಾಸ ಮಾಡುವಾಗ ಜೆರ್ಸಿ ಮೇಲೆತ್ತಿ ಹೊಟ್ಟೆ ತೋರಿಸಿಕೊಳ್ಳುವ ಫೋಟೋವೊಂದು ವೈರಲ್ ಆಗಿತ್ತು. ಈ ಫೋಟೋದಲ್ಲಿ ಬಾಬರ್ ಡೊಳ್ಳು ಹೊಟ್ಟೆ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಪಾಕ್ ಕ್ರಿಕೆಟಿಗರು ಫಿಟ್ನೆಸ್ ಕಡೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವುದಕ್ಕೆ ಈ ಫೋಟೋ ಸಾಕ್ಷಿಯಾಗಿತ್ತು.

ಬಿರಿಯಾನಿ ತಿನ್ನುತ್ತಿದ್ದರೆ ಫಿಟ್ನೆಸ್ ಬರಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪಾಕ್ ಆಟಗಾರರ ನೀರಸ ಪ್ರದರ್ಶನ ಗಮನಿಸಿ ಪಿಸಿಬಿ ಆಟಗಾರರಿಗೆ ಯೋ ಯೋ ಟೆಸ್ಟ್ ಕಡ್ಡಾಯಗೊಳಿಸಲು ಚಿಂತನೆ ನಡೆಸುತ್ತಿದೆ. ಆದರೆ ನಾಯಕ ಬಾಬರ್ ಅಜಮ್ ಹೊಟ್ಟೆ ನೋಡಿದರೇ ಫಿಟ್ನೆಸ್ ಪಾಸ್ ಮಾಡುವುದು ಅನುಮಾನವೆನಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ