ಮಾತು ಕೇಳದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಗೆ ತಂಡದಿಂದ ಡ್ರಾಪ್ ಔಟ್ ಶಿಕ್ಷೆ

Krishnaveni K

ಬುಧವಾರ, 10 ಜನವರಿ 2024 (14:05 IST)
Photo Courtesy: Twitter
ಮುಂಬೈ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಬ್ಯಾಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕಿತ್ತು ಹಾಕಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಇಶಾನ್ ಮತ್ತು ಶ್ರೇಯಸ್ ರನ್ನು ತಂಡದಿಂದ ಕೈ ಬಿಟ್ಟಿದ್ದೇಕೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇಬ್ಬರೂ ಆಟಗಾರರು ಶಿಸ್ತು ಉಲ್ಲಂಘಿಸಿದ್ದಕ್ಕೆ ತಂಡದಿಂದಲೇ ಕೈ ಬಿಡುವ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇಶಾನ್ ಮಾನಸಿಕವಾಗಿ ಸುಸ್ತಾಗಿದೆ ಎಂಬ ಕಾರಣ ನೀಡಿ ಕಳೆದ ದ.ಆಫ್ರಿಕಾ ಪ್ರವಾಸದಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿದಿದ್ದರು. ಆದರೆ ಬಳಿಕ ಧೋನಿ ಜೊತೆಗೆ ದುಬೈನಲ್ಲಿ ಪಾರ್ಟಿ ಮಾಡಿಕೊಂಡಿದ್ದ ಫೋಟೋಗಳು ವೈರಲ್ ಆಗಿತ್ತು. ಅಲ್ಲದೆ, ಟಿವಿ ಶೋ ಕೌನ್ ಬನೇಗಾ ಕರೋಡ್ ಪತಿಯಲ್ಲೂ ಕಾಣಿಸಿಕೊಂಡಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.

ಇನ್ನು, ಶ್ರೇಯಸ್ ಅಯ್ಯರ್ ಆಫ್ರಿಕಾ ಸರಣಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಅವರನ್ನು ರಣಜಿ ಕ್ರಿಕೆಟ್ ನಲ್ಲಿ ಆಡಲು ಸೂಚಿಸಲಾಗಿತ್ತು. ಆದರೆ ಅದನ್ನು ನಿರಾಕರಿಸಿ ಅಯ್ಯರ್ ಆಫ್ರಿಕಾದಲ್ಲಿಯೇ ಮೋಜು-ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕಾಗಿ ಅವರಿಗೂ ಡ್ರಾಪ್ ಔಟ್ ಶಿಕ್ಷೆ ನೀಡಲಾಗಿದೆ. ಶಿಕ್ಷೆ ವಿಧಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಯ್ಯರ್ ಈಗ ಜನವರಿ 12 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ