ಆಶಸ್ ಟೆಸ್ಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್

ಗುರುವಾರ, 29 ಜೂನ್ 2023 (16:38 IST)

ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಆಸೀಸ್ ಬ್ಯಾಟಿಗ ಸ್ಟೀವ್ ಸ್ಮಿತ್ 32 ನೇ ಟೆಸ್ಟ್ ಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

99 ನೇ ಟೆಸ್ಟ್ ಪಂದ್ಯವಾಡುತ್ತಿರುವ ಸ್ಟೀವ್ ಸ್ಮಿತ್ ಶತಕದ ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 9 ಸಾವಿರ ರನ್ ಪೂರೈಸಿದರು. ಇದರೊಂದಿಗೆ ಅತೀ ಕಡಿಮೆ ಟೆಸ್ಟ್‍ ಪಂದ್ಯದಲ್ಲಿ 9 ಸಾವಿರ ರನ್ ಗಳಿಸಿದ ವಿಶ್ವ ದಾಖಲೆ ಮಾಡಿದರು. ಈ ಮೊದಲು ಬ್ರಿಯಾನ್ ಲಾರಾ 101 ಟೆಸ್ಟ್ ಗಳಿಂದ ಈ ದಾಖಲೆ ಮಾಡಿದ್ದರು.

ಸ್ಟೀವ್ ಸ್ಮಿತ್ ಈ ಪಂದ್ಯದಲ್ಲಿ 110 ರನ್ ಗಳಿಸಿ ಔಟಾದರು. ಆಸ್ಟ್ರೇಲಿಯಾ ಇತ್ತೀಚೆಗಿನ ವರದಿ ಬಂದಾಗ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಆಸೀಸ್ ಗೆದ್ದುಕೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ