ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ಈಗ ಕಿಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಾರ್ದಿಕ್ ಪತ್ನಿ ನತಾಶಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಗಂಡನ ಜೊತೆಗಿನ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವುದು ಮಾಮೂಲು. ಆದರೆ ಈ ಬಾರಿ ಇದು ಕೊಂಚ ಅತಿರೇಕಕ್ಕೆ ಹೋಗಿದೆ.
ಹಾರ್ದಿಕ್ ಗೆ ನತಾಶಾ ಹಾಟ್ ಆಗಿ ಕಿಸ್ ಮಾಡುವ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದು ಕೊಂಚ ಅತಿಯಾಯಿತು. ಇದು ಭಾರತೀಯ ಸಂಸ್ಕೃತಿಯಲ್ಲ. ಇಂತಹದ್ದೆಲ್ಲಾ ನಿಮ್ಮ ಬೆಡ್ ರೂಂಗಳಲ್ಲಿ ಮಾಡಿಕೊಳ್ಳಿ. ಯಾಕೆ ಊರಿಗೆಲ್ಲಾ ತೋರಿಸುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.