ಜಸ್ಪ್ರೀತ್ ಬುಮ್ರಾರನ್ನು ಕ್ಯಾಪ್ಟನ್ ಮಾಡಲು ಬಿಸಿಸಿಐಗೆ ಅದೊಂದೇ ಚಿಂತೆ

Krishnaveni K

ಸೋಮವಾರ, 13 ಜನವರಿ 2025 (11:36 IST)
ಮುಂಬೈ: ಜಸ್ಪ್ರೀತ್ ಬುಮ್ರಾರನ್ನು ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ನಾಯಕನಾಗಿ ಮಾಡಲು ಬಿಸಿಸಿಐಗೆ ಇದೊಂದೇ ಚಿಂತೆಯಾಗಿದೆ. ಅದೇನು ನೋಡಿ.

ರೋಹಿತ್ ಶರ್ಮಾರನ್ನು ಟೀಂ ಇಂಡಿಯಾದ ಟೆಸ್ಟ್ ನಾಯಕತ್ವದಿಂದ ಹೊರಗಿಡಲು ಬಿಸಿಸಿಐ ಚಿಂತನೆ ನಡೆಸಿದೆ. ರೋಹಿತ್ ನೇತೃತ್ವದಲ್ಲಿ ಕಳೆದ ಎರಡು ಸರಣಿಗಳಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದೆ.

ಹೀಗಾಗಿ ಈಗ ಭಾರತ ಟೆಸ್ಟ್ ತಂಡಕ್ಕೆ ಹೊಸ ನಾಯಕನ ಆಯ್ಕೆಯ ಚಿಂತನೆ ಶುರುವಾಗಿದೆ. ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ಸರಣಿಯಲ್ಲಿ ನಾಯಕನಾಗಿ ಎಲ್ಲರನ್ನೂ ಇಂಪ್ರೆಸ್ ಮಾಡಿದ್ದರು. ಆದರೆ ಅವರನ್ನು ಖಾಯಂ ಆಗಿ ಟೆಸ್ಟ್ ತಂಡಕ್ಕೆ ನಾಯಕನಾಗಿ ಮಾಡಲು ಬಿಸಿಸಿಐಗೆ ಒಂದು ಕೊರತೆ ಕಾಣುತ್ತಿದೆ.

ಫಿಟ್ನೆಸ್ ವಿಷಯಕ್ಕೆ ಬಂದರೆ ಬುಮ್ರಾಗೆ ದೊಡ್ಡ ಮೈನಸ್ ಇದೆ. ಆಗಾಗ ಅವರು ಗಾಯಗೊಳ್ಳುತ್ತಲೇ ಇರುತ್ತಾರೆ. ಹೀಗಾಗಿ ಅವರನ್ನೇ ಕ್ಯಾಪ್ಟನ್ ಆಗಿ ಮಾಡಿದರೆ ಫಿಟ್ ಆಗಿ ಎಲ್ಲಾ ಪಂದ್ಯಗಳಿಗೂ ಲಭ್ಯರಿರುತ್ತಾರಾ, ಅವರ ಮೇಲೆ ಹೆಚ್ಚಿನ ಹೊರೆ ಬೀಳಬಹುದೇ ಎಂಬ ಚಿಂತೆ ಬಿಸಿಸಿಐಗಿದೆ. ಹೀಗಾಗಿ ಬುಮ್ರಾರನ್ನು ನಾಯಕನಾಗಿ ಮಾಡಿದರೂ ಮತ್ತೊಬ್ಬ ಪ್ರಬಲ ಆಟಗಾರನನ್ನೇ ಅವರಿಗೆ ಉಪನಾಯಕನಾಗಿ ಮಾಡಬೇಕಾಗುತ್ತದೆ. ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆಗೆ ಹೊಸ ನಾಯಕನ ಆಯ್ಕೆ ಖಚಿತ ಎನ್ನುತ್ತಿದೆ ವರದಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ