ಚಾಂಪಿಯನ್ಸ್ ಟ್ರೋಫಿಗೆ ವಿಕೆಟ್ ಕೀಪರ್ ಯಾರಾಗಬೇಕು: ಕೆಎಲ್ ರಾಹುಲ್, ರಿಷಭ್ ಪಂತ್ ನಡುವೆ ಪೈಪೋಟಿ

Krishnaveni K

ಮಂಗಳವಾರ, 7 ಜನವರಿ 2025 (12:38 IST)
ಮುಂಬೈ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರಾಗಬೇಕು ಎಂಬ ಚರ್ಚೆ ಶುರುವಾಗಿದೆ. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಪೈಪೋಟಿ ಏರ್ಪಟ್ಟಿದೆ.

ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಏಕದಿನ ಮಾದರಿಗಳಲ್ಲಿ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಹೆಚ್ಚುವರಿ ಹೊಣೆಗಾರಿಕೆಯಾಗಿದ್ದರೂ ರಾಹುಲ್ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ತಂಡಕ್ಕೆ ಮತ್ತೊಬ್ಬ ಸ್ಪೆಷಲಿಸ್ಟ್ ಬ್ಯಾಟಿಗನ ಸೇರ್ಪಡೆಗೊಳಿಸಲು ಅವಕಾಶ ನೀಡುತ್ತಿದ್ದರು.

ಆದರೆ ಈಗ ರಿಷಭ್ ಪಂತ್ ಕಮ್ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ತಂಡಕ್ಕೆ ಅವರನ್ನೂ ಆಯ್ಕೆ ಮಾಡುವುದು ಖಚಿತ. ಆದರೆ ಆಡುವ ಬಳಗದಲ್ಲಿ ಮತ್ತೆ ಹಿರಿಯ ಆಟಗಾರರಿಗೆ ಮಣೆ ಹಾಕಿದರೆ ರಾಹುಲ್ ಮತ್ತು ರಿಷಭ್ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ.

ರಿಷಭ್ ಟೆಸ್ಟ್ ಮಾದರಿಯಲ್ಲಿ ಉಪಯುಕ್ತ ಆಟಗಾರನಾಗಿದ್ದರೂ ಏಕದಿನ ಶೈಲಿಯಲ್ಲಿ ಇದುವರೆಗೆ ಅವರಿಂದ ಹೇಳಿಕೊಳ್ಳುವಂತಹ ಇನಿಂಗ್ಸ್ ಬಂದಿಲ್ಲ. ಹೀಗಾಗಿ ಒಬ್ಬ ಹೆಚ್ಚುವರಿ ಬ್ಯಾಟಿಗನನ್ನು ತಂಡಕ್ಕೆ ಸೇರ್ಪಡೆಗೊಳಿಸುವುದಿದ್ದರೆ ರಿಷಭ್ ಹೊರಗುಳಿಯಬೇಕಾಗುತ್ತದೆ. ರಾಹುಲ್ ಇತ್ತೀಚೆಗೆ ಆಸ್ಟ್ರೇಲಿಯಾ ಸರಣಿಯಲ್ಲಿ ನೀಡಿದ ನಿರ್ವಹಣೆ ಮತ್ತು ಕಳೆದ ಏಕದಿನ ವಿಶ್ವಕಪ್ ನಲ್ಲಿ ಎರಡೂ ಜವಾಬ್ಧಾರಿ ನಿಭಾಯಿಸಿದ ರೀತಿ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಜನವರಿ 12 ಕ್ಕೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ