ಟಿ20 ಸರಣಿ ನಡುವೆಯೇ ಟೀಂ ಇಂಡಿಯಾ ಪಾಳಯದಿಂದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ರನ್ನು ಹೊರಕಳುಹಿಸಿದ ಬಿಸಿಸಿಐ
ಗುರುವಾರ, 22 ನವೆಂಬರ್ 2018 (09:10 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ನಡೆಯುತ್ತಿರುವಾಗಲೇ ಟೀಂ ಇಂಡಿಯಾ ಕೋಚ್ ಸಂಜಯ್ ಬಂಗಾರ್ ಗೆ ಬಿಸಿಸಿಐ ಬೇರೆ ಜವಾಬ್ಧಾರಿ ವಹಿಸಿದೆ.
ಟೀಂ ಇಂಡಿಯಾದ ಕಿರು ಸರಣಿಯ ಜವಾಬ್ಧಾರಿಯಿಂದ ಬಂಗಾರ್ ರನ್ನು ಮುಕ್ತಗೊಳಿಸಿರುವ ಬಿಸಿಸಿಐ ಅವರನ್ನು ಸಿಡ್ನಿಗೆ ಕಳುಹಿಸಿದೆ. ಇಲ್ಲಿ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಹನುಮ ವಿಹಾರಿ ಮತ್ತು ಪೃಥ್ವಿ ಶಾ ಟೆಸ್ಟ್ ಸರಣಿಗೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು, ಅವರಿಗೆ ಕೋಚಿಂಗ್ ಮಾಡಲು ವಿಶೇಷವಾಗಿ ಸಂಜಯ್ ಬಂಗಾರ್ ರನ್ನು ನೇಮಿಸಿದೆ.
ಯುವ ಪೃಥ‍್ವಿ ಶಾ, ಹನುಮ ವಿಹಾರಿ ಜತೆಗೆ ಅಜಿಂಕ್ಯಾ ರೆಹಾನೆ, ಮುರಳಿ ವಿಜಯ್, ಚೇತೇಶ್ವರ ಪೂಜಾರ ಕೂಡಾ ಸಿಡ್ನಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಆದರೆ ಇವರ ಪೈಕಿ ಹನುಮ ವಿಹಾರಿ ಮತ್ತು ಪೃಥ್ವಿ ಶಾ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿರುವುದರಿಂದ ಅವರ ಕಡೆಗೆ ಕೋಚ್ ವಿಶೇಷ ಗಮನ ಕೊಡಲಿದ್ದಾರೆ. ಮುಂದಿನ ಐದು ದಿನಗಳವರೆಗೆ ಕೋಚ್ ಬಂಗಾರ್ ಇವರ ಮೇಲೆ ನಿಗಾವಹಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.