ಟೀಂ ಇಂಡಿಯಾ ವಿಂಡೀಸ್ ಗೆ ತೆರಳಿ ವಿಮಾನ ಖರ್ಚು ಕೇಳಿದರೆ ಶಾಕ್ ಆಗುತ್ತೀರಿ!

ಗುರುವಾರ, 21 ಜುಲೈ 2022 (10:22 IST)
ಮುಂಬೈ: ಇಂಗ್ಲೆಂಡ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಏಕದಿನ ಮತ್ತು ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ಗೆ ಬಂದಿಳಿದಿದ್ದಾರೆ.

ವಿಶೇಷ ವಿಮಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕೆರೆಬಿಯನ್ ನಾಡಿಗೆ ಕಳುಹಿಸಲು ಬಿಸಿಸಿಐ ಮಾಡಿದ ಖರ್ಚು ಕೇಳಿದರೆ ಶಾಕ್ ಆಗುತ್ತೀರಿ. ಬಿಸಿಸಿಐಗೆ ವಿಶೇಷ ವಿಮಾನದಲ್ಲಿ ಆಟಗಾರರನ್ನು ಕಳುಹಿಸಲು ಬರೋಬ್ಬರಿ 3.5 ಕೋಟಿ ರೂ. ಖರ್ಚಾಗಿದೆಯಂತೆ.

ಕಮರ್ಷಿಯಲ್ ಫ್ಲೈಟ್ ನಲ್ಲಿ ಆಟಗಾರರನ್ನು ಕಳುಹಿಸಿದ್ದರೆ ಸುಮಾರು 2 ಕೋಟಿ ರೂ. ಖರ್ಚು ಬರುತ್ತಿತ್ತು. ಯಾಕೆಂದರೆ ಟೀಂ ಇಂಡಿಯಾದಲ್ಲಿ ಆಟಗಾರರು, ಅವರ ಪತ್ನಿಯರು, ಸಹಾಯಕ ಸಿಬ್ಬಂದಿ ಸೇರಿ ಅಷ್ಟೊಂದು ಸಂಖ್ಯೆಯ ಜನರಿದ್ದಾರೆ. ಆದರೆ ಈಗ ಕೊವಿಡ್ ಭೀತಿ ಬೇರೆ. ಹೀಗಾಗಿ ಆಟಗಾರರನ್ನು ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ