ದ.ಆಫ್ರಿಕಾ ಕ್ರಿಕೆಟ್ ಲೀಗ್ ನ ಆರೂ ತಂಡಗಳ ಮಾಲಿಕತ್ವ ಪಡೆದುಕೊಂಡ ಐಪಿಎಲ್ ಫ್ರಾಂಚೈಸಿಗಳು

ಗುರುವಾರ, 21 ಜುಲೈ 2022 (10:00 IST)
ನವದೆಹಲಿ: ದ.ಆಫ್ರಿಕಾ ಟಿ20 ಕ್ರಿಕೆಟ್ ಲೀಗ್ ನ ಆರು ತಂಡಗಳ ಮಾಲಿಕತ್ವ ಐಪಿಎಲ್ ನ ಆರು ಫ್ರಾಂಚೈಸಿಗಳ ತೆಕ್ಕೆಗೆ ಸೇರಿದೆ. ಈ ಮೂಲಕ ದ.ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲಿ ಭಾರತೀಯರದ್ದೇ ಮಾಲಿಕತ್ವವಿರಲಿದೆ.

ಮುಂಬೈ ಇಂಡಿಯನ್ಸ್ ಮಾಲಿಕರಾದ ರಿಲಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕರಾದ ಇಂಡಿಯಾ ಸಿಮೆಂಟ್ಸ್, ಲಕ್ನೋ ಮಾಲಿಕರಾದ ಆರ್ ಪಿಎಸ್ ಜಿ, ಹೈದರಾಬಾದ್ ಮಾಲಿಕರಾದ ಸನ್ ಟಿವಿ, ರಾಜಸ್ಥಾನ್ ಮಾಲಿಕರಾದ ರಾಯಲ್ ಸ್ಪೋರ್ಟ್ಸ್ ಗ್ರೂಪ್,  ಡೆಲಲ್ಇ ಮಾಲಿಕರಾದ ಜೆಎಸ್ ಡಬ್ಲ್ಯು ಸ್ಪೋರ್ಟ್ಸ್ ಸಂಸ್ಥೆಗಳು ದ.ಆಫ್ರಿಕಾ ಕ್ರಿಕೆಟ್ ಲೀಗ್ ನ ಆರು ತಂಡಗಳ ಮಾಲಿಕತ್ವ ಪಡೆದುಕೊಂಡಿದೆ.

ಇದರೊಂದಿಗೆ ಆಫ್ರಿಕಾ ಲೀಗ್ ನಲ್ಲಿ ಭಾರತದ್ದೇ ಪಾರುಪತ್ಯವಿರಲಿದೆ. ಈಗಾಗಲೇ ಶಾರುಖ್ ಖಾನ್ ಮಾಲಿಕತ್ವದ ಕೆಕೆಆರ್ ತಂಡ ಕೆರೆಬಿಯನ್ ಪ್ರೀಮಿಯರ್ ಲೀಗ್ ಮತ್ತು ಯುಎಇ ಟಿ20 ಲೀಗ್ ಗಳ ತಂಡಗಳ ಮಾಲಿಕತ್ವ ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ