ದೇಶೀಯ ಕ್ರಿಕೆಟ್ ಪಂದ್ಯಾವಳಿಗಳನ್ನೂ ರದ್ದುಗೊಳಿಸಿದ ಬಿಸಿಸಿಐ

ಭಾನುವಾರ, 15 ಮಾರ್ಚ್ 2020 (09:05 IST)
ಮುಂಬೈ: ಕೊರೋನಾವೈರಸ್ ಭೀತಿಯಿಂದಾಗಿ ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯಬೇಕಿದ್ದ ಏಕದಿನ ಸರಣಿ ರದ್ದಾಗಿದ್ದರೆ, ಐಪಿಎಲ್ ಕೂಟ ಏಪ್ರಿಲ್ 15 ರವರೆಗೆ ಮುಂದೂಡಲಾಗಿದೆ.


ಇದರ ಜತೆಗೆ ಇದೀಗ ಬಿಸಿಸಿಐ ದೇಶೀಯ ಟೂರ್ನಿಗಳನ್ನೂ ಸದ್ಯಕ್ಕೆ ರದ್ದುಗೊಳಿಸಲು ಆದೇಶಿಸಿದೆ. ರಣಜಿ ಟ್ರೋಫಿ ಕ್ರಿಕೆಟ್ ಹೇಗಿದ್ದರೂ ಮುಕ್ತಾಯವಾಗಿದೆ. ಆದರೆ ಇರಾನಿ ಟ್ರೋಫಿ, ಮಹಿಳಾ ಕ್ರಿಕೆಟ್ ಟೂರ್ನಿಗಳು, ಅಂಡರ್ 19 ಪಂದ್ಯಗಳನ್ನೂ ಸದ್ಯದ ಮಟ್ಟಿಗೆ ರದ್ದುಗೊಳಿಸಲು ತೀರ್ಮಾನಿಸಿದೆ.

ಏಪ್ರಿಲ್ ಬಳಿಕವೇ ಈ ಟೂರ್ನಿಗಳ ಬಗ್ಗೆ ಬಿಸಿಸಿಐ ತೀರ್ಮಾನ ಕೈಗೊಳ್ಳಲಿದೆ. ಭಾರತ-ಆಫ್ರಿಕಾ ಸರಣಿಯೂ ಕೊರೋನಾ ತಣ್ಣಗಾದ ಮೇಲೆ ಮತ್ತೆ ನಡೆಯಲಿದೆ ಎನ್ನಲಾಗಿದೆ. ಆದರೆ ಅಲ್ಲಿಯವರೆಗೆ ಕ್ರೀಡಾಚಟುವಟಿಕೆಗಳೂ ಸಂಪೂರ್ಣ ಸ್ತಬ್ಧವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ