ಐಪಿಎಲ್ ನಡೆಸಲು ಸಮಯ ಗೊತ್ತು ಮಾಡಿಕೊಂಡಿರುವ ಬಿಸಿಸಿಐ

ಗುರುವಾರ, 21 ಮೇ 2020 (09:40 IST)
ಮುಂಬೈ: ಕೊರೋನಾದಿಂದಾಗಿ ಇದುವರೆಗೆ ಈ ವರ್ಷದ ಐಪಿಎಲ್ ಕ್ರೀಡಾಕೂಟ ನಡೆದಿಲ್ಲ. ಇದರಿಂದಾಗಿ ಫ್ರಾಂಚೈಸಿಗಳು, ಬಿಸಿಸಿಐ, ಆಟಗಾರರು ಎಲ್ಲರೂ ನಷ್ಟದ ಚಿಂತೆಯಲ್ಲಿದ್ದಾರೆ.


ಈ ನಡುವೆ ಐಪಿಎಲ್ ನಡೆಸಲು ಬಿಸಿಸಿಐ ಹೊಸ ಸಮಯವೊಂದನ್ನು ಗೊತ್ತು ಮಾಡಿಕೊಂಡಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ ಮತ್ತು ನವಂಬರ್ ತಿಂಗಳ ಅವಧಿಯಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ ಎನ್ನಲಾಗಿದೆ.

ಅಕ್ಟೋಬರ್ ನಿಂದ ನವಂಬರ್ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಅದೇ ಸಮಯವನ್ನು ಐಪಿಎಲ್ ಗೆ ಬಳಸಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಸಂದರ್ಭದಲ್ಲಿ ವಿದೇಶೀ ಆಟಗಾರರ ಲಬ‍್ಯತೆ ಬಗ್ಗೆ, ಸರ್ಕಾರದ ನಿರ್ದೇಶನದ ಬಗ್ಗೆಯೂ ಯೋಜನೆ ರೂಪಿಸಬೇಕಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ