ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಇಷ್ಟು ದಿನ ಬೇಕು!

ಬುಧವಾರ, 20 ಮೇ 2020 (09:17 IST)
ಮುಂಬೈ: ಕೊರೋನಾದಿಂದಾಗಿ ಕಳೆದ ಎರಡು ತಿಂಗಳಿನಿಂದ ಕ್ರಿಕೆಟ್ ನಡೆದಿಲ್ಲ, ಮೈದಾನಕ್ಕಿಳಿದಿಲ್ಲ, ಜಿಮ್ ಗೆ ಹೋಗಿ ಫಿಟ್ನೆಸ್ ಮಾಡಿಲ್ಲ. ಹೀಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಮತ್ತೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳುವುದು ಸುಲಭವಲ್ಲ.

 
ಕ್ರಿಕೆಟಿಗರು ಮತ್ತೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ತಯಾರಾಗಲು ಇನ್ನು 6-8 ವಾರ ಬೇಕಾಗಬಹುದು ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

ಕ್ರಿಕೆಟಿಗರು ಮತ್ತೆ ತಯಾರಾಗಲು 6-8 ವಾರಗಳ ಕಾಲ ತರಬೇತಿ ಕ್ಯಾಂಪ್ ನಲ್ಲಿ ಪಾಲ್ಗೊಳ್ಳಬೇಕಾಗಬಹುದು. ವೃತ್ತಿಪರ ಕ್ರಿಕೆಟಿಗರಿಗೆ ಮನೆಯಲ್ಲೇ ಕೂರುವುದು ಹತಾಶೆ ಉಂಟುಮಾಡಬಹುದು. ಹೀಗಾಗಿ ಅವರು ಮತ್ತೆ ಉತ್ತೇಜನಗೊಳ್ಳಲು ತರಬೇತಿ ಕ್ಯಾಂಪ್ ಅಗತ್ಯ. ಈ ಬಗ್ಗೆ ಈಗಾಗಲೇ ಟೀಂ ಮ್ಯಾನೇಜ್ ಮೆಂಟ್ ಚಿಂತನೆ ನಡೆಸುತ್ತಿದೆ’ ಎಂದು ಭರತ್ ಅರುಣ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ