ಕೊರೋನಾದಿಂದಾಗಿ ವೇತನ ಕಟ್: ಮಂಡಳಿ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟಿಗರ ಆಕ್ರೋಶ

ಬುಧವಾರ, 20 ಮೇ 2020 (09:15 IST)
ಸಿಡ್ನಿ: ಕೊರೋನಾದಿಂದಾಗಿ ಜಾಗತಿಕವಾಗಿ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಟೂರ್ನಮೆಂಟ್ ಗಳು ನಡೆಯದೇ ನಷ್ಟದಲ್ಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಂತೂ ಕ್ರಿಕೆಟಿಗರ ವೇತನಕ್ಕೆ ಕತ್ತರಿ ಹಾಕುವ ನಿರ್ಧಾರ ಕೈಗೊಂಡಿದೆ. ಇದು ಕ್ರಿಕೆಟಿಗರ ಅಸೋಸಿಯೇಷನ್ ಅಸಮಾಧಾನಕ್ಕೆ ಕಾರಣವಾಗಿದೆ.


ಆಸ್ಟ್ರೇಲಿಯಾ ಕ್ರಿಕೆಟಿಗರು ಸೇರಿದಂತೆ ಶೇ. 80 ರಷ್ಟು ಸಿಬ್ಬಂದಿಗಳ ಶೇ. 20 ರಷ್ಟು ವೇತನಕ್ಕೆ ಕತ್ತರಿ ಹಾಕಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ. ಇದರ ವಿರುದ್ಧ ತಿರುಗಿಬಿದ್ದಿರುವ ಆಟಗಾರರ ಸಂಘ ಇದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ಈಗಾಗಲೇ ಪಾಕಿಸ್ತಾನವೂ ತನ್ನ ಆಟಗಾರರ ವೇತನಕ್ಕೆ ಕತ್ತರಿ ಹಾಕಿತ್ತು. ಆದರೆ ಭಾರತೀಯ ಕ್ರಿಕೆಟ್ ಮಂಡಳಿ ಇದುವರೆಗೆ ಟೀಂ ಇಂಡಿಯಾ ಆಟಗಾರರ ವೇತನ ಕಡಿತ ಮಾಡುವ ನಿರ್ಧಾರ ಕೈಗೊಂಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ