ಐಪಿಎಲ್ 2023: ಹರಾಜು ಪ್ರಕ್ರಿಯೆ ದಿನಾಂಕ, ಸ್ಥಳ ನಿಗದಿ

ಸೋಮವಾರ, 14 ನವೆಂಬರ್ 2022 (08:30 IST)
ಮುಂಬೈ: ಐಪಿಎಲ್ 2023 ಕ್ಕೆ ಹರಾಜು ಪ್ರಕ್ರಿಯೆ ದಿನಾಂಕ ಮತ್ತು ಸ್ಥಳವನ್ನು ಐಪಿಎಲ್ ಮ್ಯಾನೇಜ್ ಮೆಂಟ್ ಅಂತಿಮಗೊಳಿಸಿದೆ.

ಡಿಸೆಂಬರ್ 23 ರಂದು ಕೇರಳದ ಕೊಚ್ಚಿಯಲ್ಲಿ ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಇದುವರೆಗೆ ಬೆಂಗಳೂರು, ಕೋಲ್ಕೊತ್ತಾ ಇತ್ಯಾದಿ ಸ್ಥಳದಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು. ಇದೇ ಮೊದಲ ಬಾರಿಗೆ ಕೊಚ್ಚಿಯಲ್ಲಿ ನಡೆಯುತ್ತಿದೆ.

ಪ್ರತೀ ತಂಡಕ್ಕೂ ಆಟಗಾರರನ್ನು ಖರೀದಿ ಮಾಡಲು ಹೆಚ್ಚುವರಿಯಾಗಿ 5 ಕೋಟಿ ಸಿಗಲಿದೆ. ಇದಲ್ಲದೆ 90 ಕೋಟಿ ರೂ. ಪ್ರತೀ ಫ್ರಾಂಚೈಸಿ ಬಳಿಯಿರಲಿದೆ. ಮತ್ತೆ ಹಲವು ಆಟಗಾರರು ಈ ಬಾರಿ ತಂಡ ಬದಲಾವಣೆ ಮಾಡಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ