ರೋಹಿತ್, ದ್ರಾವಿಡ್, ಕೊಹ್ಲಿಗೆ ಬಿಸಿಸಿಐ ಬುಲಾವ್: ಆಯ್ಕೆ ಸಮಿತಿಗೂ ಕೊಕ್?

ಸೋಮವಾರ, 14 ನವೆಂಬರ್ 2022 (08:10 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಜಾರಿ ಬಿದ್ದ ಬಳಿಕ ಅಭಿಮಾನಿಗಳು, ಬಿಸಿಸಿಐ ಅಸಮಾಧಾನಗೊಂಡಿದೆ.

ಇದೀಗ ಬಿಸಿಸಿಐ ಉನ್ನತಾಧಿಕಾರಿಗಳು ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಒಳಗೊಂಡಂತೆ ರಿವ್ಯೂ ಮೀಟಿಂಗ್ ನಡೆಸಲು ಉದ್ದೇಶಿಸಿದ್ದು, ಎಲ್ಲರಿಗೂ ಬುಲಾವ್ ನೀಡಲಾಗಿದೆ. ಈ ವಿಶ್ವಕಪ್ ಸೋಲಿಗೆ ಕಾರಣವೇನು ಮತ್ತು ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಕಿರು ಮಾದರಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಈ ಸಭೆಯಲ್ಲಿ ಚರ್ಚೆಯಾಗಲಿದೆ.

ಇನ್ನು, ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಬಗ್ಗೆಯೂ ಅಸಮಾಧಾನ ಕೇಳಿಬಂದಿದ್ದು, ಚೇತನ್ ಶರ್ಮಾರನ್ನು ಮುಖ್ಯ ಆಯ್ಕೆಗಾರ ಸ್ಥಾನದಿಂದ ವಜಾಗೊಳಿಸುವ ಸಾಧ‍್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ