ಐಪಿಎಲ್ 2023 ಕ್ಕೆ ರಿಲೀಸ್ ಪರ್ವ ಶುರು: ಯಾವ್ಯಾವ ಆಟಗಾರರಿಗೆ ಕೊಕ್ ನೀಡಲಾಗಿದೆ ಇಲ್ಲಿದೆ ನೋಡಿ!

ಸೋಮವಾರ, 14 ನವೆಂಬರ್ 2022 (08:20 IST)
ಮುಂಬೈ: ಐಪಿಎಲ್ 2023 ರ ಹರಾಜು ಪ್ರಕ್ರಿಯೆಗೆ ತಯಾರಿ ಆರಂಭವಾಗಿದ್ದು, ಫ‍್ರಾಂಚೈಸಿಗಳು ಇದೇ ವಾರ ರಿಲೀಸ್ ಮಾಡುತ್ತಿರುವ ಆಟಗಾರರ ಪಟ್ಟಿ ನೀಡಬೇಕಿದೆ.

ಈಗಾಗಲೇ ಆಯಾ ಫ‍್ರಾಂಚೈಸಿಗಳು ರಿಲೀಸ್ ಮಾಡುವ ಆಟಗಾರರ ಪಟ್ಟಿ ಸಿದ್ಧಪಡಿಸಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಸ್ಟ್ರೇಲಿಯಾ ಮೂಲದ ಜೇಸನ್ ಬೆಂಡ್ರೋಫ್ ರನ್ನು ಬಿಟ್ಟುಕೊಟ್ಟಿದ್ದು, ಅವರೀಗ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.

ಇನ್ನು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಬಟಿ ರಾಯುಡು, ಡ್ವಾನ್ ಬ್ರಾವೋರನ್ನು ರಿಲೀಸ್ ಮಾಡಲು ತಯಾರಾಗಿದೆ. ಮುಂಬೈ ಇಂಡಿಯನ್ಸ್ ಕೂಡಾ ತನ್ನ ಹಿರಿಯ ಆಟಗಾರ ಕಿರನ್ ಪೊಲ್ಲಾರ್ಡ್ ರನ್ನು ಬಿಟ್ಟುಕೊಡಲಾಗಿದೆ. ಸನ್ ರೈಸರ್ಸ್ ತಂಡ ಅಬ್ದುಲ್ ಸಮದ್ ರನ್ನು ಹೊರಹಾಕುತ್ತಿದೆ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ಕನ್ನಡಿಗ ಮನೀಶ್ ಪಾಂಡೆ, ವಿಂಡೀಸ್ ನ ಜೇಸನ್ ಹೋಲ್ಡರ್ ರನ್ನು ರಿಲೀಸ್ ಮಾಡುತ್ತಿದೆ. ಇನ್ನಷ್ಟು ಆಟಗಾರರ ಪಟ್ಟಿ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ