‘ದಾದ’ ಗಂಗೂಲಿ ಬಯೋಪಿಕ್ ಶೀಘ್ರದಲ್ಲೇ ನಿರೀಕ್ಷಿಸಿ!

ಗುರುವಾರ, 9 ಸೆಪ್ಟಂಬರ್ 2021 (17:29 IST)
ಮುಂಬೈ: ಭಾರತೀಯ ಕ್ರಿಕೆಟ್ ರಂಗದ ‘ದಾದ’ ಸೌರವ್ ಗಂಗೂಲಿ ಕುರಿತಾದ ಸಿನಿಮಾವೊಂದು ಸದ್ಯದಲ್ಲೇ ತಯಾರಾಗಲಿದೆ.


ಈಗಾಗಲೇ ಸಚಿನ್, ಧೋನಿ, ಮೊಹಮ್ಮದ್ ಅಜರುದ್ದೀನ್ ರಂತಹ ಕ್ರಿಕೆಟಿಗರ ಆತ್ಮಕತೆ ಸಿನಿಮಾ ರೂಪದಲ್ಲಿ ಬಂದಿದೆ. ಇದೀಗ ಗಂಗೂಲಿ ಸರದಿ.

ಗಂಗೂಲಿ ಟೀಂ ಇಂಡಿಯಾ ಕಂಡ ಯಶಸ್ವೀ, ಆಕ್ರಮಣಕಾರೀ ಆಟಗಾರ. ಅವರ ವೃತ್ತಿಜೀವನ ವರ್ಣರಂಜಿತವಾಗಿತ್ತು. ಎಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದು, ಎಷ್ಟೋ ಯುವ ಕ್ರಿಕೆಟಿಗರನ್ನು ಬೆಳೆಸಿದ ನಾಯಕ. ಅವರ ಜೀವನಗಾಥೆಯನ್ನು ಸಿನಿಮಾ ರೂಪದಲ್ಲಿ ನೋಡಬೇಕೆಂಬುದು ಎಷ್ಟೋ ಜನರ ನಿರೀಕ್ಷೆಯಾಗಿತ್ತು. ಅದೀಗ ನಿಜವಾಗುತ್ತಿದೆ. Luve Films ನಿರ್ಮಾಣ ಸಂಸ್ಥೆ ಗಂಗೂಲಿ ಕುರಿತ ಸಿನಿಮಾ ನಿರ್ಮಾಣ ಮಾಡಲಿದೆ. ಉಳಿದ ವಿವರಗಳು ಸದ್ಯದಲ್ಲೇ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ