ಸೋತ ವೆಸ್ಟ್ ಇಂಡೀಸ್ ಗೆ ಬ್ರಿಯಾನ್ ಲಾರಾ, ಸರವಣ್ ತರಬೇತಿ

ಶನಿವಾರ, 17 ಆಗಸ್ಟ್ 2019 (11:40 IST)
ಆಂಟಿಗುವಾ: ಭಾರತದ ವಿರುದ್ಧ ಈಗಾಗಲೇ ಟಿ20 ಮತ್ತು ಏಕದಿನ ಸರಣಿ ಸೋತು ಸುಣ್ಣವಾಗಿರುವ ವೆಸ್ಟ್ ಇಂಡೀಸ್ ತಂಡ ಇನ್ನು ಟೆಸ್ಟ್ ಸರಣಿ ಆಡಲಿದೆ. ಆದರೆ ಈ ಸರಣಿಯಲ್ಲೂ ಪ್ರವಾಸಿ ತಂಡವನ್ನು ಎದುರಿಸುವ ಚಿಂತೆ ವಿಂಡೀಸ್ ಗೆ ಎದುರಾಗಿದೆ.


ಟೀಂ ಇಂಡಿಯಾಗೆ ಹೋಲಿಸಿದರೆ ವಿಂಡೀಸ್ ದುರ್ಬಲವಾಗಿದ್ದು, ಪ್ರಬಲ ಪೈಪೋಟಿ ನೀಡಲು ದಿಗ್ಗಜ ಕ್ರಿಕೆಟಿಗರಾದ ಬ್ರಿಯಾನ್ ಲಾರಾ ಮತ್ತು ರಾಮ್ ನರೇಶ್ ಸರವಣ್ ಅವರ ಸಹಾಯ ಎದುರು ನೋಡುತ್ತಿದೆ.

ಸೋತು ಸುಣ್ಣವಾಗಿರುವ ತಂಡಕ್ಕೆ ಭಾರತದ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಈ ಇಬ್ಬರೂ ದಿಗ್ಗಜ ಕ್ರಿಕೆಟಿಗರು ತರಬೇತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ವಿರುದ್ಧ ವಿಂಡೀಸ್ 2 ಟೆಸ್ಟ್ ಪಂದ್ಯಗಳನ್ನಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ