ಏಕದಿನ ಸರಣಿ ನಡೆಯುತ್ತಿರುವುದು ಇಂಗ್ಲೆಂಡ್ ನಲ್ಲೋ, ಟೀಂ ಇಂಡಿಯಾದಲ್ಲೋ?! ಹೀಗೊಂದು ಪ್ರಶ್ನೆ ಮೂಡಿದ್ದೇಕೆ ಗೊತ್ತಾ?

ಶನಿವಾರ, 14 ಜುಲೈ 2018 (09:58 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯನ್ನು ಕೈವಶ ಮಾಡಿಕೊಂಡ ಮೇಲೆ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯವನ್ನೂ ತನ್ನದೇ ರೀತಿಯಲ್ಲಿ ಗೆದ್ದಿದೆ. ಇದಾದ ಬಳಿಕ ಬ್ರಿಟಿಷ್ ಮಾಧ್ಯಮಗಳು ತಮ್ಮ ತವರಿನ ತಂಡವನ್ನು ವಿಚಿತ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ಹೇಳಿ ಕೇಳಿ ಇಂಗ್ಲೆಂಡ್ ಪಿಚ್ ಗಳು ವೇಗಿಗಳಿಗೆ ಹೆಸರುವಾಸಿ. ಆದರೆ ಭಾರತ ಅಲ್ಲಿಗೆ ಕಾಲಿಟ್ಟಾಗಿನಿಂದ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸುತ್ತಿದ್ದಾರೆ. ಇಷ್ಟು ಪಂದ್ಯಗಳಲ್ಲಿ ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದಿರುವುದು ಸ್ಪಿನ್ನರ್ ಗಳ ಸಹಾಯದಿಂದಲೇ. ಅತ್ತ ಇಂಗ್ಲೆಂಡ್ ವೇಗಿಗಳಿಗೂ ಯಶಸ್ಸು ಸಿಕ್ಕಿಲ್ಲ.

ಇದನ್ನು ನೋಡಿದ ಮೇಲೆ ಬ್ರಿಟಿಷ್‍ ಮಾಧ್ಯಮಗಳು ಭಾರತವನ್ನು ಅತಿಥೇಯ ತಂಡ ಎಂದು ಕರೆದಿದೆ. ಇಲ್ಲಿ ಇಂಗ್ಲೆಂಡ್ ಗಿಂತ ಹೆಚ್ಚು ಭಾರತವೇ ಸ್ಥಳೀಯ ಲಾಭ ಪಡೆಯುತ್ತಿದೆ. ತಮ್ಮ ತವರಿನಲ್ಲಿ ಆಡುತ್ತಿರುವಂತೆ ಅವರಿಗೆ ಇಲ್ಲೂ ಸಾಕಷ್ಟು ಅಭಿಮಾನಿಗಳ ಬೆಂಬಲ ಮೈದಾನದಲ್ಲಿಸಿಗುತ್ತಿದೆ ಎಂದು ಬಣ್ಣಿಸಿವೆ. ಏಕದಿನ ಸರಣಿಯೂ ಇಂಗ್ಲೆಂಡ್ ಸೋತರೆ ಅಲ್ಲಿನ ಮಾಧ್ಯಮಗಳಿಂದ ಛೀಮಾರಿ ಹಾಕಿಸಿಕೊಳ್ಳುವುದು ಖಂಡಿತಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ