ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್‌ಗೆ ಬಲ ತುಂಬಲು ನಾಳೆ ನಡೆಯುವ ಪಂದ್ಯಾಟಕ್ಕೆ ಜಸ್ಪ್ರೀತ್ ಬೂಮ್ರಾ ಅವರು ಸೇರಿಕೊಳ್ಳಲಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಶನಿವಾರವೇ ಭಾರತದ ವೇಗಿ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಬುಮ್ರಾ ಆಗಮನವನ್ನು ಮುಂಬೈ ಇಂಡಿಯನ್ಸ್ ತಂಡವು ಬಹುನಿರೀಕ್ಷಿತವಾಗಿ ನಿರೀಕ್ಷಿಸುತ್ತಿದೆ. ಇದೀಗ ಐಪಿಎಲ್ 2025ರ ಪಂದ್ಯದ 5ನೇ ಪಂದ್ಯಾಟಕ್ಕೆ ತಂಡವನ್ನು ಬುಮ್ರಾ ಸೇರಿಕೊಂಡಿದ್ದಾರೆ. ನಾಳೆ ತವರಿನಲ್ಲಿ ಮುಂಬೈ ಇಂಡಿಯನ್ಸ್, ಆರ್‌ಸಿಬಿಯನ್ನು ಎದುರಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದು ಬಾರಿ ಚಾಂಪಿಯನ್‌ಗಳಾಗಿರುವ ಮುಂಬೈ ಇಂಡಿಯನ್ಸ್ ಪಡೆ ಈ ಬಾರಿ ನಡೆದ ನಾಲ್ಕು ಪಂದ್ಯಾಟದಲ್ಲಿ ಒಂದು ಗೆಲುವು ಸಾಧಿಸಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಇದೀಗ ಬುಮ್ರಾ ಅವರ ಆಗಮನದೊಂದಿಗೆ ಆರ್‌ಸಿಬಿ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ.
ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಬುಮ್ರಾ ತಂಡವನ್ನು ಸೇರಲಿದ್ದಾರೆ ಎಂದು ಸುಳಿವು ನೀಡಿದ್ದರು. "ಜಸ್ಪ್ರೀತ್ ಶೀಘ್ರದಲ್ಲೇ ಹಿಂತಿರುಗಬೇಕು" ಎಂದು ಇತ್ತೀಚೆಗೆ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಎಂಐ ತಂಡದ ವಿದೇಶ ಪಂದ್ಯದ ಸಮಯದಲ್ಲಿ ಎಂಐ ನಾಯಕ ಹೇಳಿದರು.
ಜನವರಿಯಿಂದ ಬುಮ್ರಾ ಆಟದಿಂದ ದೂರವಿದ್ದಾರೆ. ಇತ್ತೀಚೆಗೆ, ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನ ಕ್ರೀಡಾ ವಿಜ್ಞಾನ ವಿಭಾಗದಿಂದ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಹಲವು ಬಾರಿ ಭೇಟಿ ನೀಡಿದ್ದಾರೆ ಮತ್ತು ಇತ್ತೀಚೆಗೆ ಐಪಿಎಲ್‌ನಲ್ಲಿ ಭಾಗವಹಿಸಲು ಅನುಮತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.