ಐಪಿಎಲ್‌ನ ಪಂದ್ಯದಲ್ಲಿ ಮುಂಬೈಗೆ ಲಖನೌ ಸವಾಲು: ಫ್ರಾಂಚೈಸಿಗೆ ದುಬಾರಿ ಆಟಗಾರ ಪಂತ್‌ನಲ್ಲೇ ಚಿಂತೆ
ಐದು ಬಾರಿಯ ಚಾಂಪಿಯನ್ ಮುಂಬೈ ಮೂರು ಪಂದ್ಯಗಳಿಂದ ಒಂದು ಪಂದ್ಯ ಗೆದ್ದು ಎರಡು ಪಾಯಿಂಟ್ಸ್ ಅಷ್ಟೇ ಗಳಿಸಿದೆ. ಭಾರತ ತಂಡದ ನಾಯಕ ರೋಹಿತ್ ವಿಫಲರಾಗುತ್ತಿರುವುದು ತಂಡಕ್ಕೆ ಕಳವಳ ಮೂಡಿಸಿದೆ.
ಲಖನೌ ತಂಡದ ಕಥೆಯೂ ಭಿನ್ನವಾಗಿಲ್ಲ. ಈ ತಂಡವೂ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿದೆ. ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆದ ನಾಯಕ ಪಂತ್ ತಿಣುಕಾಡುತ್ತಿರುವುದು ತಂಡದ ಬ್ಯಾಟಿಂಗ್ ಸರದಿಯ ಮೇಲೆ ಒತ್ತಡ ಹೆಚ್ಚಿಸಿದೆ.ತಂಡ ಬ್ಯಾಟಿಂಗ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ರೋಹಿತ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಮೇಲೆ ಹೆಚ್ಚಿನ ಹೊಣೆಯಿದೆ.