ಬೇಕೆಂದೇ ಕಳಪೆ ಪ್ರದರ್ಶನ ಕೊಡ್ತಿದ್ದಾರಾ ರೋಹಿತ್ ಶರ್ಮಾ: ಜಹೀರ್ ಖಾನ್ ಜೊತೆಗಿನ ವಿಡಿಯೋ ವೈರಲ್

Krishnaveni K

ಶುಕ್ರವಾರ, 4 ಏಪ್ರಿಲ್ 2025 (11:02 IST)
Photo Credit: X
ಮುಂಬೈ: ಮುಂಬೈ ಇಂಡಿಯನ್ಸ್ ಮಾಜಿ ನಾಯಕ, ಆರಂಭಿಕ ರೋಹಿತ್ ಶರ್ಮಾ ಬೇಕೆಂದೇ ಕಳಪೆ ಪ್ರದರ್ಶನ ನೀಡುತ್ತಿದ್ದಾರಾ? ಲಕ್ನೋ ಕೋಚ್ ಜಹೀರ್ ಖಾನ್ ಜೊತೆ ನಡೆಸಿದ ಸಂಭಾಷಣೆ ನೋಡಿದಾಗ ಅಭಿಮಾನಿಗಳಿಗೆ ಹೀಗೊಂದು ಅನುಮಾನ ಶುರುವಾಗಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ.

ಇಂದು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಪಂದ್ಯ ನಡೆಯಲಿದೆ. ಇದಕ್ಕಾಗಿ ಮೈದಾನದಲ್ಲಿ ಉಭಯ ತಂಡಗಳು ಅಭ್ಯಾಸ ನಡೆಸುತ್ತಿದ್ದಾಗ ಲಕ್ನೋ ಕೋಚ್ ಜಹೀರ್ ಜೊತೆ ರೋಹಿತ್ ನಡೆಸುತ್ತಿರುವ ಸಂಭಾಷಣೆ ತುಣುಕು ವೈರಲ್ ಆಗಿದೆ.

‘ನಾನು ಮಾಡಬೇಕಾದಾಗ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ. ಈಗ ನಾನು ಏನೂ ಮಾಡಲ್ಲ, ಅದರ ಅಗತ್ಯವೂ ನನಗಿಲ್ಲ’ ಎನ್ನುತ್ತಾರೆ. ಅವರ ಈ ಮಾತುಕತೆ ವೇಳೆ ರಿಷಭ್ ಪಂತ್ ಹಿಂದಿನಿಂದ ಬಂದು ರೋಹಿತ್ ರನ್ನು ತಬ್ಬಿಕೊಳ್ಳುತ್ತಾರೆ. ಅಲ್ಲಿಗೆ ಇಬ್ಬರ ನಡುವಿನ ಸಂಭಾಷಣೆ ಮುಗಿಯುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಹಾಗಿದ್ದರೆ ತಮ್ಮನ್ನು ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಬೇಕೆಂದೇ ರೋಹಿತ್ ಕಳಪೆ ಪ್ರದರ್ಶನ ನೀಡುತ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

????????Selfish Greedy Rohit Sharma got exposed again. Last year he was talking with Abhishek Nair now with EX MI Bowling coach Zaheer Khan.

“Mujhe jo karna tha maine tab barabar se kiya, ab mereko koi jarurat nhi” (probably about his batting for MI)

MI deleted this video ???? pic.twitter.com/NE8lALUama

— Fearless???? (@ViratTheLegend) April 3, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ