ಪಕ್ಕಾ ರಾಹುಲ್ ದ್ರಾವಿಡ್ ಶೈಲಿಯಲ್ಲಿ ಆಡಿದ ಚೇತೇಶ್ವರ ಪೂಜಾರ

ಶನಿವಾರ, 1 ಸೆಪ್ಟಂಬರ್ 2018 (09:57 IST)
ಸೌಥಾಂಪ್ಟನ್: ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುತ್ತಾ ಸಾಗಿದರೂ ಅಚಲವಾಗಿ ತಂಡಕ್ಕಾಗಿ ಆಡಬೇಕು ಎಂಬುದು ರಾಹುಲ್ ದ್ರಾವಿಡ್ ಥಿಯರಿ. ಚೇತೇಶ್ವರ ಪೂಜಾರ ಕೂಡಾ ಇದನ್ನೇ ಮಾಡಿದರು.

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ದಿಡೀರ್ ಕುಸಿತ ಕಂಡು ಒಂದು ಹಂತದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ಮೊತ್ತದ ಗುರಿ ತಲುಪುವ ಮೊದಲೇ ಆಲೌಟ್ ಆಗುವ ಅಪಾಯವಿತ್ತು. ಆದರೆ ಬಂಡಯಂತೆ ನಿಂತ ಚೇತೇಶ್ವರ ಪೂಜಾರ ಥೇಟ್ ರಾಹುಲ್ ದ್ರಾವಿಡ್ ರಂತೇ ಬಾಲಂಗೋಚಿಗಳ ಸಹಾಯದಿಂದ ನಿಂತು ಆಡಿ ಶತಕ ಗಳಿಸಿ ಕೊನೆಯವರೆಗೂ ನಾಟೌಟ್ ಆಗಿ ಉಳಿದರು.

ಪೂಜಾರ ಒಟ್ಟು 132 ರನ್ ಗಳಿಸಿದರು. ಇವರ ಸಾಹಸದಿಂದಾಗಿ ಭಾರತಕ್ಕೆ 23 ರನ್ ಗಳ ಅಲ್ಪ ಮುನ್ನಡೆ ಲಭಿಸಿತು. ಟೀಂ ಇಂಡಿಯಾ 273 ರನ್ ಗಳಿಗೆ ಆಲೌಟ್ ಆಯಿತು. ನಿನ್ನೆಯ ದಿನದಂತ್ಯಕ್ಕೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ