ಕ್ರಿಕೆಟಿಗರಿಗೆ ಉರುಳಾಗುತ್ತಿದೆ ಬಯೋಬಬಲ್

ಭಾನುವಾರ, 3 ಅಕ್ಟೋಬರ್ 2021 (10:14 IST)
ದುಬೈ: ಹೊಡೆಬಡಿಯ ಕ್ರಿಕೆಟಿಗ ಕ್ರಿಸ್ ಗೇಲ್ ಐಪಿಎಲ್ 14 ರಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಬಯೋಬಬಲ್ ನಲ್ಲಿರುವ ಮಾನಸಿಕ ಒತ್ತಡ.


ಬಯೋಬಬಲ್ ನ ಕಟ್ಟು ನಿಟ್ಟಿನ ನಿಯಮಗಳಿಂದಾಗಿ ಕ್ರಿಕೆಟಿಗರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಅದಕ್ಕೆ ಪುರಾವೆ ಎಂಬಂತೆ ಇತ್ತೀಚೆಗೆ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟ್ರೋಕ್ ಸೇರಿದಂತೆ ಹಲವರು ಐಪಿಎಲ್ ಸೇರಿದಂತೆ ಇತರ ಕ್ರಿಕೆಟ್ ಸರಣಿಗಳಿಂದಲೂ ಹೊರಬಂದಿದ್ದರು.

ಹೊರಗಡೆ ಎಲ್ಲೂ ಸುತ್ತಾಡುವಂತಿಲ್ಲ, ಹೊರಗಿನವರನ್ನು ಭೇಟಿಯಾಗುವಂತಿಲ್ಲ. ಅಭ್ಯಾಸ ಬಿಟ್ಟರೆ ಹೋಟೆಲ್ ಕೊಠಡಿಯೊಳಗೇ ಕೂತು ಜೈಲಿನಲ್ಲಿರುವ ಹಾಗೆ ಕಾಲ ಕಳೆಯುವ ಶಿಕ್ಷೆ ಕ್ರಿಕೆಟಿಗರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಗೇಲ್ ಕೂಡಾ ವಿಶ್ವಕಪ್ ಗೆ ಮೊದಲು ರಿಫ್ರೆಷ್ ಆಗುವ ನಿಟ್ಟಿನಲ್ಲಿ ಬಯೋಬಬಲ್ ನಿಂದ ಹೊರಬಂದು ಸ್ವತಂತ್ರರಾಗಲು ನಿರ್ಧರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ