ಬೆಂಗಳೂರಿಗೇ ಬಂದು ಆರ್ ಸಿಬಿಯ ಅವಮಾನಿಸಿದ ಸಿಎಸ್ ಕೆ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್: ವಿಡಿಯೋ
ಆರ್ ಸಿಬಿ ಮತ್ತು ಸಿಎಸ್ ಕೆ ನಡುವೆ ಮೈದಾನದಲ್ಲಿ ಮತ್ತು ಫ್ಯಾನ್ಸ್ ನಡುವನ ಜಿದ್ದಾಜಿದ್ದಿ ಎಲ್ಲರಿಗೂ ಗೊತ್ತೇ ಇದೆ. ಕಳೆದ ಸೀಸನ್ ನಲ್ಲಿ ಸಿಎಸ್ ಕೆ ಅಂತಿಮ ಘಟ್ಟದಿಂದ ಹೊರಬೀಳಲು ಕಾರಣವಾಗಿದ್ದರೂ ಆರ್ ಸಿಬಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡಿದ ಹಲವು ಉದಾಹರಣೆಗಳಿವೆ.
ಇದೀಗ ಋತುರಾಜ್ ಗಾಯಕ್ವಾಡ್ ಬೆಂಗಳೂರಿನಲ್ಲಿ ಇನ್ ಫೋಸಿಸ್ ನಡೆಸಿದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಈ ವೇಳೆ ಅವರನ್ನು ವೇದಿಕೆಯಲ್ಲಿ ನಿಲ್ಲಿಸಿ ಮಾತನಾಡಿಸಲು ನಿರೂಪಕರು ಆರಂಭಿಸಿದ್ದಾರೆ.
ಅವರಿಗೆ ಮೊದಲ ಪ್ರಶ್ನೆ ಕೇಳಿದಾಗ ಮೈಕ್ ಆಫ್ ಆಗಿದ್ದು ಋತುರಾಜ್ ಕೊಂಚ ಇರಿಸು ಮುರಿಸುಗೊಂಡರು. ಬಳಿಕ ಬಹುಶಃ ಆರ್ ಸಿಬಿಯವರು ಯಾರೋ ಮೈಕ್ ಆಫ್ ಮಾಡಿರಬೇಕು ಎಂದು ತಮಾಷೆ ಮಾಡಿದ್ದಾರೆ. ಇದು ಆರ್ ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿಗೇ ಬಂದು ಆರ್ ಸಿಬಿಗೆ ಅವಮಾನ ಮಾಡಿದ್ದೀರಿ. ಇದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.