ಐಪಿಎಲ್ 13 ನಲ್ಲಿ ಸಿಎಸ್ ಕೆ ತಂಡದ ಕುಟುಂಬಕ್ಕಿಲ್ಲ ಎಂಟ್ರಿ: ಮಿಸ್ ಆಗಲಿದೆಯಾ ಜೀವಾ ಧೋನಿ ಝಲಕ್?

ಶುಕ್ರವಾರ, 7 ಆಗಸ್ಟ್ 2020 (14:18 IST)
ಚೆನ್ನೈ: ಐಪಿಎಲ್ 13 ಗೆ ಯುಎಇನಲ್ಲಿ ಸಕಲ ತಯಾರಿ ಆರಂಭವಾಗಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಕಿಟ್ ರೆಡಿ ಮಾಡುತ್ತಿದೆ. ಆದರೆ ಈ ಬಾರಿ ಐಪಿಎಲ್ ಗೆ ಆಟಗಾರರ ಜತೆ ಕುಟುಂಬದವರು ಪ್ರಯಾಣಿಸಲ್ಲ ಎಂಬ ಸುದ್ದಿ ಬಂದಿದೆ.


ಬಿಸಿಸಿಐ ಈಗಾಗಲೇ ನೀತಿ ನಿಯಮಾಳಿಗಳ ಪಟ್ಟಿ ನೀಡಿದ್ದು, ಅದರಲ್ಲಿ ಪಂದ್ಯವಾಡುವಾಗ ಮತ್ತು ತರಬೇತಿ ಸಮಯದಲ್ಲಿ ಆಟಗಾರರ ಜತೆ ಕುಟುಂಬದವರು ಇರುವಂತಿಲ್ಲ ಎಂಬ ನಿಯಮವಿದೆ.

ಈ ಹಿನ್ನಲೆಯಲ್ಲಿ ಕುಟುಂಬ ಸದಸ್ಯರನ್ನು ಜತೆಗೇ ಕರೆದೊಯ್ಯದೇ ಇರಲು ಸಿಎಸ್ ಕೆ ಪಾಳಯ ತೀರ್ಮಾನಿಸಿದೆ ಎನ್ನಲಾಗಿದೆ. ಪ್ರತೀ ಬಾರಿಯೂ ಸಿಎಸ್ ಕೆ ತಂಡ ಆಡುವಾಗ ನಾಯಕ ಧೋನಿ ಪುತ್ರಿ ಜೀವಾ ಧೋನಿ, ಪತ್ನಿ ಸಾಕ್ಷಿ ಸಿಂಗ್ ಸೇರಿದಂತೆ ಸಿಎಸ್ ಕೆ ಕುಟುಂಬ ವರ್ಗದವರೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಾರೆ. ಒಂದು ವೇಳೆ ತಂಡದ ಜತೆಗೆ ಅವರು ಪ್ರಯಾಣಿಸದೇ ಇದ್ದರೆ ಈ ಝಲಕ್ ಮಿಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ