ಐಪಿಎಲ್ ಪ್ರಾಯೋಜಕತ್ವ ಪಡೆಯಲು ದೈತ್ಯ ಕಂಪನಿಗಳ ಪೈಪೋಟಿ

ಶುಕ್ರವಾರ, 7 ಆಗಸ್ಟ್ 2020 (13:47 IST)
ಮುಂಬೈ: ಚೀನಾ ಮೂಲದ ವಿವೋ ಮೊಬೈಲ್ ಸಂಸ್ಥೆ ಐಪಿಎಲ್ 13 ಆವೃತ್ತಿಯ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಬೇರೆ ಕಂಪನಿಗಳು ಟೈಟಲ್ ಪ್ರಾಯೋಜಕತ್ವ ಪಡೆಯಲು ಪೈಪೋಟಿಗೆ ಬಿದ್ದಿವೆ.


ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟದಲ್ಲಿದೆ. ಈ ನಡುವೆ ಈ ಶ್ರೀಮಂತ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಲು ಕಂಪನಿಗಳೂ ಉತ್ಸುಕವಾಗಿದೆ.

ಅಮೆಝೋನ್, ಬೈಜುಸ್ ಆಪ್ , ಡ್ರೀಮ್ 11 ಮುಂತಾದ ದೈತ್ಯ ಕಂಪನಿಗಳು ಈಗ ಪ್ರಮುಖ ಪ್ರಾಯೋಜಕರಾಗಲು ಸ್ಪರ್ಧೆಯಲ್ಲಿವೆ. ಇದೀಗ ಪೂರ್ಣ ಪ್ರಾಯೋಜಕತ್ವ ಹಕ್ಕು ಯಾರಿಗೆ ಸೇರಲಿದೆ ಎಂಬುದು ತೀರ್ಮಾನವಾಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ