ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ಬಿಗ್ ಬಾಸ್ ದೀಪಿಕಾ ದಾಸ್ ಫೋಟೋ ವೈರಲ್

ಮಂಗಳವಾರ, 14 ಫೆಬ್ರವರಿ 2023 (09:00 IST)
Photo Courtesy: Instagram
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ, ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಜೊತೆ ಕನ್ನಡ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೀಪಿಕಾ ತಮ್ಮ ಗೆಳತಿಯರ ಜೊತೆ ದುಬೈ ಪ್ರವಾಸ ಮಾಡಿದ್ದಾರೆ. ಈ ವೇಳೆ ಅಕಸ್ಮಾತ್ತಾಗಿ ಕ್ರಿಸ್ ಗೇಲ್ ರನ್ನು ಭೇಟಿಯಾಗಿದ್ದಾರೆ. ಅದೇ ಖುಷಿಯಲ್ಲಿ ಆತ್ಮೀಯವಾಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಗೇಲ್ ರನ್ನು ಭೇಟಿಯಾಗಿ ಹಳೆಯ ಆರ್ ಸಿಬಿ ದಿನಗಳು ನೆನಪಾದವು ಎಂದು ದೀಪಿಕಾ ಬರೆದುಕೊಂಡಿದ್ದಾರೆ. ಇವರಿಬ್ಬರ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ