ಏಕದಿನ ನಂ.1 ಪಟ್ಟ ಕಳೆದುಕೊಂಡ ಪಾಕಿಸ್ತಾನ

ಶುಕ್ರವಾರ, 8 ಸೆಪ್ಟಂಬರ್ 2023 (09:00 IST)
Photo Courtesy: Twitter
ದುಬೈ: ಏಷ್ಯಾ ಕಪ್ ಕ್ರಿಕೆಟ್ ಗೆ ನಂ.1 ಏಕದಿನ ತಂಡವಾಗಿ ಕಣಕ್ಕಿಳಿದಿದ್ದ ಪಾಕಿಸ್ತಾನ ಈಗ ಒಂಭತ್ತನೇ ದಿನಕ್ಕೆ ಅಗ್ರ ಸ್ಥಾನ ಕಳೆದುಕೊಂಡಿದೆ.

ಇದೀಗ ನೂತನ ನಂ.1 ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿದೆ. ಸೆಪ್ಟೆಂಬರ್ 10 ರಂದು ಪಾಕಿಸ್ತಾನ ತಂಡ ಸೂಪರ್ ಫೋರ್ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ಗೆದ್ದರೆ ಮತ್ತೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಗೆದ್ದ ಆಸ್ಟ್ರೇಲಿಯಾ ಮರಳಿ ತನ್ನ ನಂ.1 ಪಟ್ಟ ಪಡೆದುಕೊಂಡಿದೆ. ಇದರೊಂದಿಗೆ ಒಂಭತ್ತು ದಿನಗಳ ಹಿಂದಷ್ಟೇ ಪಡೆದಿದ್ದ ನಂ.1 ಸ್ಥಾನವನ್ನು ಪಾಕಿಸ್ತಾನ ಕಳೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ