ಅತ್ಯಾಚಾರ ಆರೋಪಿಗೆ ಆಟೋಗ್ರಾಫ್: ರೋಹಿತ್ ಶರ್ಮಾಗೆ ಫ್ಯಾನ್ಸ್ ತರಾಟೆ

ಗುರುವಾರ, 7 ಸೆಪ್ಟಂಬರ್ 2023 (16:04 IST)
ಕೊಲೊಂಬೋ: ಏಷ್ಯಾ ಕಪ್ ನಲ್ಲಿ ನೇಪಾಳ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾ ಹಿರಿಯ ಆಟಗಾರರು ನೇಪಾಳ ಆಟಗಾರರ ಜೊತೆ ಕಾಲ ಕಳೆದಿದ್ದರು.

ಈ  ವೇಳೆ ನೇಪಾಳ ಕ್ರಿಕೆಟಿಗರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮುಂತಾದವರ ಆಟೋಗ್ರಾಫ್ ಪಡೆದಿದ್ದರು. ಆದರೆ ರೋಹಿತ್ ಶರ್ಮಾ ನೇಪಾಳದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಂಚನೆಗೆ ಆಟೋಗ್ರಾಫ್ ನೀಡಿರುವ ಫೋಟೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾಕೆಂದರೆ ಸಂದೀಪ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈಗ ಅದೇ ಕ್ರಿಕೆಟಿಗನಿಗೆ ರೋಹಿತ್ ಆಟೋಗ್ರಾಫ್ ನೀಡಿದ್ದಕ್ಕೆ ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ