ವಿಶ್ವಕಪ್ ಕ್ರಿಕೆಟ್ ಟಿಕೆಟ್ ಗೆ ಹೆಚ್ಚಿದ ಬೇಡಿಕೆ: ಟಿಕೆಟ್ ಸಂಖ್ಯೆ ಹೆಚ್ಚಳ ಮಾಡಿದ ಬಿಸಿಸಿಐ

ಶುಕ್ರವಾರ, 8 ಸೆಪ್ಟಂಬರ್ 2023 (08:29 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್ ಗಳು ಆನ್ ಲೈನ್ ನಲ್ಲಿ ಬಿಕರಿಯಾಗುತ್ತಿದ್ದು, ವೀಕ್ಷಕರಿಂದ ಭಾರೀ ಬೇಡಿಕೆ ಬಂದಿದೆ.

ಆನ್ ಲೈನ್ ಟಿಕೆಟ್ ಗೆ ಅವಕಾಶ ಮಾಡಿಕೊಟ್ಟ ಕೆಲವೇ ಗಂಟೆಗಳಲ್ಲಿ ಟಿಕೆಟ್ ಬಿಕರಿಯಾಗಿತ್ತು. ಹಲವರಿಗೆ ಟಿಕೆಟ್ ಖರೀದಿ ಸಾಧ‍್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು.

ಈ ಹಿನ್ನಲೆಯಲ್ಲಿ ಬಿಸಿಸಿಐ ಈಗ ಟಿಕೆಟ್ ಸಂಖ್ಯೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಬೇಡಿಕೆ ಗಮನಿಸಿ 400,000 ಲಕ್ಷ ಟಿಕೆಟ್ ಗಳನ್ನು ಹೆಚ್ಚುವರಿಯಾಗಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ