ಫೀಲ್ಡಿಂಗ್ ಸೆಟ್ ಮಾಡುತ್ತಿದ್ದ ಯಜುವೇಂದ್ರ ಚಾಹಲ್ ರನ್ನು ಧೋನಿ ಲೇವಡಿ ಮಾಡಿದ್ದು ಹೀಗೆ!
ಬ್ಯಾಟ್ಸ್ ಮನ್ ನೀಶಾಮ್ ಬ್ಯಾಟಿಂಗ್ ಗೆ ರೆಡಿಯಾಗಿದ್ದರೂ ಚಾಹಲ್ ಫೀಲ್ಡಿಂಗ್ ಸೆಟ್ಟಿಂಗ್ ಮುಗಿಸಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ನಿಂತಿದ್ದ ಬದಲಿ ಕ್ಷೇತ್ರರಕ್ಷಕ ಕುಲದೀಪ್ ಯಾದವ್ ಬಳಿ ಧೋನಿ ಹಿಂದಿಯಲ್ಲಿ ‘ಅವನಿಗೆ ಬೌಲ್ ಮಾಡಲು ಬಿಡಿ. ಫೀಲ್ಡಿಂಗ್ ಮಾಡುವ ವಿಚಾರದಲ್ಲಿ ಮುತ್ತಯ್ಯ ಮುರಳೀಧರನ್ ಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಾನೆ ಇವ’ ಎಂದು ನಗುತ್ತಾ ಕಾಲೆಳೆದಿದ್ದು ನೋಡಿ ಅಲ್ಲಿದ್ದವರ ಮೊಗದಲ್ಲೂ ನಗು ಮೂಡಿತ್ತು. ಈ ಸಂಭಾಷಣೆಯ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.