ಬೆಂಗಳೂರು: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಈಗ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಸಮಿತ್ ದ್ರಾವಿಡ್ ಕೂಚ್ ಬೆಹರ್ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಅವರು ಬ್ಯಾಟಿಂಗ್, ಬೌಲಿಂಗ್ ಮಾಡುವ ವಿಡಿಯೋಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು.
ತಂದೆಯಂತೆ ಕೇವಲ ಬ್ಯಾಟಿಗನಾಗಿರದೇ ಸಮಿತ್ ಬೌಲಿಂಗ್ ಕೂಡಾ ಮಾಡಲು ಸರ್ಮಥರು. ಸಮಿತ್ ಆಲ್ ರೌಂಡರ್ ಆಟವನ್ನು ನೋಡಿ ನೆಟ್ಟಿಗರು ತಂದೆಗೆ ತಕ್ಕ ಮಗ ಎಂದು ಕೊಂಡಾಡಿದ್ದಾರೆ. ಆದರೆ ದ್ರಾವಿಡ್ ಎಂದಿಗೂ ತಮ್ಮ ಮಗನಿಗೆ ಕೋಚ್ ಆಗಿ ಕೆಲಸ ಮಾಡಲ್ವಂತೆ.
ಇದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ. ನಾನು ಯಾವತ್ತೂ ನನ್ನ ಮಗನಿಗೆ ಹಾಗೆ ಆಡು, ಹೀಗೆ ಆಡು ಎಂದು ಕೋಚಿಂಗ್ ಮಾಡಲು ಹೋಗಲ್ಲ. ಯಾಕೆಂದರೆ ಮಗನಿಗೆ ಕೋಚಿಂಗ್ ಮಾಡುವುದು ಕಷ್ಟ. ಕೋಚಿಂಗ್ ಮತ್ತು ತಂದೆಯ ಜವಾಬ್ಧಾರಿ ಏಕಕಾಲಕ್ಕೆ ನಿಭಾಯಿಸಲು ಆಗುವುದಿಲ್ಲ. ನಾನು ನನ್ನ ಮಗನಿಗೆ ಕೋಚ್ ಆಗಿ ಇರುವುದಕ್ಕಿಂತ ತಂದೆಯಾಗಿರಲು ಇಷ್ಟಪಡುತ್ತೇನೆ ಎಂದಿದ್ದಾರೆ.