ಐಪಿಎಲ್ ನಿಂದ ಹಿಂದೆ ಸರಿದ ಇಂಗ್ಲೆಂಡ್ ಕ್ರಿಕೆಟಿಗರು

ಭಾನುವಾರ, 12 ಸೆಪ್ಟಂಬರ್ 2021 (09:01 IST)
ಲಂಡನ್: ಟೀಂ ಇಂಡಿಯಾ ಐದನೇ ಟೆಸ್ಟ್ ಪಂದ್ಯವಾಡದ ಸಿಟ್ಟು ಇಂಗ್ಲೆಂಡ್ ಕ್ರಿಕೆಟಿಗರಲ್ಲಿ ಮನೆ ಮಾಡಿದೆ. ಇದೀಗ ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್ ನಿಂದ ಹಿಂದೆ ಸರಿದು ತಮ್ಮ ಸಿಟ್ಟು ಹೊರಹಾಕಿದ್ದಾರೆ.


ದುಬೈಗೆ ಬಂದಿಳಿದ ಮೇಲೆ ಐಪಿಎಲ್ ಕ್ರಿಕೆಟಿಗರು ಕಡ್ಡಾಯವಾಗಿ ಆರು ದಿನಗಳ ಕ್ವಾರಂಟೈನ್ ಗೊಳಗಾಗಬೇಕು. ಈ ನಿಯಮದ ನೆಪ ಹೇಳಿ ಈಗ ಇಂಗ್ಲೆಂಡ್ ನ ಸ್ಟಾರ್ ಆಟಗಾರರು ಐಪಿಎಲ್ 14 ರಿಂದ ಹಿಂದೆ ಸರಿದಿದ್ದಾರೆ.

ಆ ಪೈಕಿ ಜಾನಿ ಬೇರ್ ಸ್ಟೋ, ಡೇವಿಡ್ ಮಲನ್,  ಕ್ರಿಸ್ ವೋಕ್ಸ್ ಸೇರಿದ್ದಾರೆ. ಇವರೆಲ್ಲಾ ತಮ್ಮ ತಂಡಕ್ಕೆ ಪ್ರಮುಖ ಆಟಗಾರರು. ಈ ಎಲ್ಲಾ ಕ್ರಿಕೆಟಿಗರು ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ