ಐದನೇ ಟೆಸ್ಟ್ ನಿಂದ ಹಿಂದೆ ಸರಿದ ಟೀಂ ಇಂಡಿಯಾಗೆ ಸೇಡು ತೀರಿಸಲು ಮುಂದಾದ ಇಂಗ್ಲೆಂಡ್

ಭಾನುವಾರ, 12 ಸೆಪ್ಟಂಬರ್ 2021 (08:42 IST)
ಲಂಡನ್: ಕೊರೋನಾ ನೆಪದಿಂದ ಐದನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಇಂಗ್ಲೆಂಡ್ ಕ್ರಿಕೆಟಿಗರು ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ.


ಇಂಗ್ಲೆಂಡ್ ಕ್ರಿಕೆಟಿಗರ ಆಕ್ರೋಶ ಎಷ್ಟರಮಟ್ಟಿಗಿದೆಯೆಂದರೆ ಈಗ ಐಪಿಎಲ್ 2021 ರಿಂದ ಹಿಂದೆ ಸರಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಐಪಿಎಲ್ ತಂಡವನ್ನು ಕೂಡಿಕೊಳ್ಳುವ ಉದ್ದೇಶದಿಂದ ಕೊರೋನಾ ನೆಪ ಹೇಳಿ ಐದನೇ ಟೆಸ್ಟ್ ನಿಂದ ಭಾರತೀಯ ಕ್ರಿಕೆಟಿಗರು ಹಿಂದೆ ಸರಿದಿದ್ದಾರೆ ಎನ್ನುವುದು ಇಂಗ್ಲೆಂಡಿಗರ ಆರೋಪ. ಇದರಿಂದ ಕ್ರಿಕೆಟ್ ಮಂಡಳಿಗೂ ಭಾರೀ ನಷ್ಟವಾಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಐಪಿಎಲ್ ಕೂಟಕ್ಕೂ ಬಹಿಷ್ಕಾರ ಹಾಕುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ