ಭಾರತ-ಪಾಕಿಸ್ತಾನ ಕದನ: ಕೊಹ್ಲಿ-ಬಾಬರ್ ಮೇಲೆ ಎಲ್ಲರ ಕಣ್ಣು
ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ ಕೊಹ್ಲಿ ಸದ್ಯಕ್ಕೆ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಆದರೆ ಅಜಮ್ ಟಿ20 ಫಾರ್ಮ್ಯಾಟ್ ನಲ್ಲಿ ಅದ್ಭುತ ಬ್ಯಾಟಿಗ. ಹೀಗಾಗಿ ಇಬ್ಬರು ಬ್ಯಾಟಿಂಗ್ ಕಲಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಟೀಂ ಇಂಡಿಯಾ ಗೆಲ್ಲಬೇಕಾದರೆ ಕೊಹ್ಲಿ ಮರಳಿ ಫಾರ್ಮ್ ಪ್ರದರ್ಶಿಸಬೇಕು. ಇದರಿಂದಾಗಿ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸುವುದಷ್ಟೇ ಅಲ್ಲ, ಎದುರಾಳಿಗಳಿಗೂ ಭೀತಿ ಒಡ್ಡುತ್ತಾರೆ. ಹೀಗಾಗಿ ಏಷ್ಯಾ ಕಪ್ ನಲ್ಲಿ ಮರಳಿ ಫಾರ್ಮ್ ಗೆ ಮರಳಲು ಕೊಹ್ಲಿ ಕಠಿಣ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.