ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಫೋಟೋ: ಸಿಎಸ್ ಕೆ ನಾಯಕನಿಗೆ ಆಹ್ವಾನವಿತ್ತ ಫ್ಯಾನ್!

ಶನಿವಾರ, 3 ಜೂನ್ 2023 (09:20 IST)
ರಾಂಚಿ: ಕೂಲ್ ಕ್ಯಾಪ್ಟನ್ ಧೋನಿಗೆ ಹುಚ್ಚು ಅಭಿಮಾನಿಗಳಿದ್ದಾರೆ. ಇದೀಗ ಐಪಿಎಲ್ ನಲ್ಲಿ 5 ನೇ ಪ್ರಶಸ್ತಿ ಗೆದ್ದ ಬಳಿಕವಂತೂ ಧೋನಿ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ.

ಛತ್ತೀಸ್ ಘಡದ ಅಭಿಮಾನಿಯೊಬ್ಬ ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಧೋನಿ ಫೋಟೋ ಪ್ರಿಂಟ್ ಮಾಡಿಸಿರುವುದಲ್ಲದೆ, ಆಹ್ವಾನ ಪತ್ರಿಕೆಯನ್ನು ಧೋನಿಗೇ ಕಳುಹಿಸಿದ್ದಾನೆ.

ಧೋನಿ ಫೋಟೋವಿರುವ ಆಹ್ವಾನ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೋನಿ ಕ್ರಿಕೆಟಿಗನಾಗಿ ಎಷ್ಟೋ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ