ಪತ್ನಿ ಎಂದರೆ ಹೀಗಿರಬೇಕು! ರವೀಂದ್ರ ಜಡೇಜಾ ಪತ್ನಿಗೆ ನೆಟ್ಟಿಗರ ಮೆಚ್ಚುಗೆ
ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಸಿಕ್ಸರ್, ಬೌಂಡರಿ ಗಳಿಸಿ ಚೆನ್ನೈಗೆ ಐದನೇ ಐಪಿಎಲ್ ಫೈನಲ್ ಗೆಲುವು ಕೊಡಿಸಿದ್ದರು. ಈ ಗೆಲುವಿನ ಬಳಿಕ ಪತಿಯನ್ನು ನೋಡಿ ಭಾವುಕರಾದ ರಿವಾಬ ಮೊದಲು ಜಡೇಜಾ ಕಾಲಿಗೆ ಬಿದ್ದು ನಮಸ್ಕರಿಸಿ ಬಳಿಕ ಅಪ್ಪಿ ಕಣ್ಣೀರು ಹಾಕಿದ್ದರು.
ಮೈ ತುಂಬಾ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದ ರಿವಾಬ ಪತಿಯ ಕಾಲಿಗೆ ನಮಸ್ಕರಿಸಿದ ರೀತಿಗೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಕಾಲದಲ್ಲೂ ಈ ರೀತಿ ಗಂಡನ ಆಶೀರ್ವಾದ ಪಡೆಯುವ ಸಂಪ್ರದಾಯ ಪಾಲಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.