ರೋಹಿತ್ ಶರ್ಮಾ ಕಾಲಿಗೆ ಬಿದ್ದು ಆಟೋಗ್ರಾಫ್ ಪಡೆದುಕೊಂಡ ಯುವತಿ

Krishnaveni K

ಸೋಮವಾರ, 15 ಏಪ್ರಿಲ್ 2024 (16:18 IST)
ಮುಂಬೈ: ಟೀಂ ಇಂಡಿಯಾ ನಾಯಕ, ಮುಂಬೈ ಇಂಡಿಯನ್ಸ್ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಎಂದರೆ ಆರಾಧಿಸುವ ಎಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಇದೀಗ ನಿನ್ನೆಯ ಸಿಎಸ್ ಕೆ ವಿರುದ್ಧದ ಪಂದ್ಯದ ನಂತರ ರೋಹಿತ್ ಶರ್ಮಾ ಇಂತಹದ್ದೇ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.

ಮೋನಿಕಾ ಎಂಬ ಯುವತಿ ರೋಹಿತ್ ಶರ್ಮಾರ ಚಿತ್ರ ಬಿಡಿಸಿ ತಂದಿದ್ದಾಳೆ. ಇದನ್ನು ರೋಹಿತ್ ಶರ್ಮಾಗೆ ತೋರಿಸಿದ್ದಾಳೆ. ಮುಂಬೈ ಮೂಲದವಳಾಗಿರುವ ಯುವತಿ ಕೇವಲ ರೋಹಿತ್ ಮಾತ್ರವಲ್ಲದೆ, ಮುಂಬೈ ತಂಡದ ಪ್ರಮುಖ ಆಟಗಾರರ ಚಿತ್ರ ಬಿಡಿಸಿ ತಂದಿದ್ದಾಳೆ.

ಅಭಿಮಾನಿ ಬಿಡಿಸಿದ ಚಿತ್ರ ನೋಡಿ ರೋಹಿತ್ ಖುಷಿಗೊಂಡು ಆಟೋಗ್ರಾಫ್ ನೀಡಿದ್ದಾರೆ. ಜೊತೆಗೆ ಆಕೆ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ  ವೇಳೆ ಮೋನಿಕಾ ರೋಹಿತ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾಳೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದಕ್ಕೆ ಮೊದಲು ರೋಹಿತ್ ಮುಂಬೈ ಇಂಡಿಯನ್ಸ್ ತಂಡದ ಬಸ್ ಚಲಾಯಿಸಿ ಎಲ್ಲರ ಗಮನ ಸೆಳೆದಿದ್ದರು. ರೋಹಿತ್ ಶರ್ಮಾ ಮೈದಾನದ ಹೊರಗಿರಲಿ, ಒಳಗಿರಲಿ ಅಭಿಮಾನಿಗಳನ್ನು ರಂಜಿಸಲು ಮರೆಯುವುದಿಲ್ಲ. ಇದೀಗ ಅಭಿಮಾನಿಯ ಮನಸ್ಸಿಗೂ ಖುಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ