ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟಿಗ ಟಿ20 ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. 105 ರನ್ ಗಳ ಅಜೇಯ ಇನಿಂಗ್ಸ್ ಆಡಿದ ರೋಹಿತ್ 5 ಸಿಕ್ಸರ್ ಕೂಡಾ ಸಿಡಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ 500 ಸಿಕ್ಸರ್ ಗಳ ದಾಖಲೆ ಮಾಡಿದರು. ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ 5 ನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ 1056 ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಕೀರನ್ ಪೊಲ್ಲಾರ್ಡ್ 860 ಸಿಕ್ಸರ್ ಸಿಡಿಸಿ ದ್ವಿತೀಯ, 678 ಸಿಕ್ಸರ್ ಸಿಡಿಸಿದ ಆಂಡ್ರೆ ರಸೆಲ್, ಕಾಲಿನ್ ಮನ್ರೋ 548 ಸಿಕ್ಸರ್ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ. ರೋಹಿತ್ ಈ ದಾಖಲೆ ಮಾಡಿದ ಪ್ರಥಮ ಭಾರತೀಯ.
ನಿನ್ನೆ ರೋಹಿತ್ 11 ಬೌಂಡರಿ ಕೂಡಾ ಹೊಡೆದಿದ್ದರು. ಟಿ20 ಕ್ರಿಕೆಟ್ ನಲ್ಲಿ 1000 ಬೌಂಡರಿ ಮತ್ತು 500 ಸಿಕ್ಸರ್ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ರೋಹಿತ್ ಗೆ ಮೊದಲು ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎಂದರೆ ಕ್ರಿಸ್ ಗೇಲ್ ಮಾತ್ರ. ಆದರೆ ರೋಹಿತ್ ಶರ್ಮಾ ಶತಕದ ಹೊರತಾಗಿಯೂ ಮುಂಬೈ ಪಂದ್ಯ ಸೋತಿತು.