KL Rahul: ನಿಜವಾದ ತಲಾ ನೀವೇ, ಕೆಎಲ್ ರಾಹುಲ್ ಗೆ ಅಭಿಮಾನಿಗಳು ಹೀಗಂದಿದ್ಯಾಕೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಡೆಲ್ಲಿ ಈ ಮೊತ್ತ ಗಳಿಸಲು ನೆರವಾಗಿದ್ದು ರಾಹುಲ್. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ಮತ್ತೆ ತಮ್ಮಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ತಮ್ಮನ್ನು ಟಿ20 ಕ್ರಿಕೆಟ್ ಗೆ ಲಾಯಕ್ಕಿಲ್ಲ ಎನ್ನುವವರಿಗೆ ಮತ್ತೆ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.
ಇಂದಿನ ಪಂದ್ಯದಲ್ಲಿ ಅವರು 51 ಎಸೆತ ಎದುರಿಸಿ 77 ರನ್ ಗಳಿಸಿದರು. ಏಕಾಂಗಿಯಾಗಿ ತಂಡದ ಬ್ಯಾಟಿಂಗ್ ಹೊಣೆ ಹೊತ್ತ ರಾಹುಲ್ ಗೌರವಯುತ ಮೊತ್ತ ಕೊಡಿಸಲು ನೆರವಾದರು. ವಿಕೆಟ್ ಕೀಪಿಂಗ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಐಪಿಎಲ್ ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರ ಎಂದರೆ ರಾಹುಲ್.
ಹೀಗಾಗಿ ಅಭಿಮಾನಿಗಳು ರಿಯಲ್ ತಲಾ ನೀವೇ ಎಂದು ಕೊಂಡಾಡಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಗೆ ನಿಮ್ಮನ್ನು ಆಯ್ಕೆಮಾಡದೇ ಇದ್ದರೆ ಅವರೇ ನಿಜವಾದ ಮೂರ್ಖರು ಎಂದು ಅಭಿಪ್ರಾಯಪಟ್ಟಿದ್ದಾರೆ.