ಚೆನ್ನೈ: ಸತತ ಎರಡು ಪಂದ್ಯಗಳನ್ನು ಸೋತಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನ ಇಂದಿನ ಪಂದ್ಯದಲ್ಲಿ ಟೂರ್ನಿಯಲ್ಲಿ ಅಜೇಯವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ದುಕೊಂಡಿದೆ. ಚೆನ್ನೈ ತಂಡವು ಫೀಲ್ಡಿಂಗ್‌ಗೆ ಇಳಿಯಲಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಕನ್ನಡಿಗ ಕೆ.ಎಲ್,.ರಾಹುಲ್ ಮುಖಾಮುಖಿಯಾಗುತ್ತಿದ್ದಾರೆ.
ಚೆನ್ನೈ ತಂಡ ನಾಯಕ ಋತುರಾಜ್ ಗಾಯಕವಾಡ ಅವರು ಗಾಯಾಳಾಗಿರುವ ಕಾರಣ ಈ ಪಂದ್ಯಕ್ಕೆ ಅನುಮಾನವಿತ್ತು. ಆದರೆ, ಟಾಸ್ ವೇಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಗುವಾಹಟಿಯಲ್ಲಿ ಮಾ. 30ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ ದಲ್ಲಿ ಋತುರಾಜ್ ಅವರ ಮೊಣಕೈಗೆ ಗಾಯವಾಗಿತ್ತು.
ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಮಾಡಿದ ಚೆನ್ನೈ ತಂಡವು ನಂತರ ಆರ್‌ಸಿಬಿ ವಿರುದ್ಧ 50 ರನ್‌ಗಳಿಂದ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿತ್ತು. ಇದೀಗ ಗೆಲುವಿನ ಲಯಕ್ಕೆ ಬರುವ ಛಲದಲ್ಲಿದೆ. ಡೆವೋನ್ ಕಾನ್ವೆ ಮತ್ತು ಮುಕೇಶ್ ಚೌಧರಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.
ಅನುಭವಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವು ಲಖನೌ ಸೂಪರ್ ಜೈಂಟ್ಸ್ ತಂಡವನ್ನು 1 ವಿಕೆಟ್‌ನಿಂದ, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು. ಇದೀಗ ಹ್ಯಾಟ್ರಿಕ್ ಗೆಲುವಿನ ಪ್ರಯತ್ನದಲ್ಲಿದೆ. ತಂಡದ ಅನುಭವಿ ಆಟಗಾರ ಫಫ್ ಡುಪ್ಲೆಸಿಸ್ ಗಾಯಳಾಗಿರುವ ಕಾರಣ ಸಮೀರ್ ರಿಜ್ವಿ ಸ್ಥಾನ ಪಡೆದಿದ್ದಾರೆ.