Rishabh Pant: ರಿಷಭ್ ಪಂತ್ ಮತ್ತೆ ಫೇಲ್, ಕೆಎಲ್ ರಾಹುಲ್ ಫ್ಯಾನ್ಸ್ ಗೆ ಖುಷಿಯೋ ಖುಷಿ

Krishnaveni K

ಶನಿವಾರ, 5 ಏಪ್ರಿಲ್ 2025 (08:44 IST)
ಲಕ್ನೋ: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 27 ಕೋಟಿ ರೂ. ದಾಖಲೆಯ ಮೊತ್ತ ಕೊಟ್ಟು ಖರೀದಿ ಮಾಡಿದ್ದ ರಿಷಭ್ ಪಂತ್ ದಯನೀಯ ವೈಫಲ್ಯ ಅನುಭವಿಸುತ್ತಿದ್ದರೆ ಇತ್ತ ಕೆಎಲ್ ರಾಹುಲ್ ಅಭಿಮಾನಿಗಳು ಒಳಗೊಳಗೇ ನಗುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಕಳೆದ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕಳಪೆ ಪ್ರದರ್ಶನಕ್ಕೆ ಕೆಎಲ್ ರಾಹುಲ್ ರನ್ನೇ ಮಾಲಿಕ ಸಂಜೀವ್ ಗೊಯೆಂಕಾ ಟಾರ್ಗೆಟ್ ಮಾಡಿದ್ದರು. ಮೈದಾನದಲ್ಲೇ ಅವರಿಗೆ ಅವಮಾನ ಮಾಡಿದ್ದಲ್ಲದೆ, ಕೊನೆಗೆ ತಂಡದಿಂದಲೂ ಕೈ ಬಿಟ್ಟಿದ್ದರು. ಇದೀಗ ರಾಹುಲ್ ಡೆಲ್ಲಿ ತಂಡದ ಪಾಲಾಗಿದ್ದಾರೆ.

ಇತ್ತ ಸಂಜೀವ್ ಗೊಯೆಂಕಾ, ರಿಷಭ್ ಪಂತ್ ರನ್ನು ದುಬಾರಿ ಮೊತ್ತಕ್ಕೆ ಖರೀದಿಸಿ ಏನೋ ಸಾಧಿಸಿದವರಂತೆ ಬೀಗಿದ್ದರು. ಆದರೆ ರಿಷಭ್ ಬ್ಯಾಟ್ ಇದುವರೆಗೆ ಸಿಡಿದಿಲ್ಲ. ನಿನ್ನೆಯ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಅವರು ಗಳಿಸಿದ್ದು ಕೇವಲ 2 ರನ್.

ಇದಾದ ಬಳಿಕ ಕೆಎಲ್ ರಾಹುಲ್ ಅಭಿಮಾನಿಗಳು ಸಂಜೀವ್ ಗೊಯೆಂಕಾರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ರಾಹುಲ್ ಗೆ ಅವಮಾನ ಮಾಡಿದ್ದಕ್ಕೆ ನಿಮಗೆ ತಕ್ಕ ಶಾಸ್ತಿಯಾಗಿದೆ. ಈ ಆಟಗಾರನಿಗೆ 27 ಕೋಟಿ ಕೊಟ್ಟು ವೇಸ್ಟ್ ಮಾಡಿದೆ ಎಂದು ಈಗ ನಿಮಗೆ ಅನಿಸಿರಬಹುದು ಎಂದು ಸಂಜೀವ್ ಗೊಯೆಂಕಾರನ್ನು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ