ಭಾರತ-ಲಂಕಾ ಟೆಸ್ಟ್ ನಲ್ಲಿ ಕೆಜಿಎಫ್ ಹವಾ

ಸೋಮವಾರ, 14 ಮಾರ್ಚ್ 2022 (17:09 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಡುವೆ ಕೆಜಿಎಫ್ ಸಿನಿಮಾದ ಸಲಾಂ ರಾಕಿ ಭಾಯ್ ಹಾಡು ಮೊಳಗಿದೆ.

ಮೊನ್ನೆಯಷ್ಟೇ ಚಿನ್ನಸ್ವಾಮಿ ಅಂಗಣದಲ್ಲಿ ಪುನೀತ್ ರಾಜ್ ಕುಮಾರ್ ಗೌರವಾರ್ಥ ಬೊಂಬೆ ಹೇಳುತೈತೆ ಹಾಡು ಹಾಕಲಾಗಿತ್ತು. ಇಂದು ಕೆಜಿಎಫ್ ನ ಸಲಾಂ ರಾಕಿ ಭಾಯ್ ಹಾಡು ಹಾಕಲಾಗಿದೆ.

ಈ ವೇಳೆ ಪ್ರೇಕ್ಷಕರಿಂದ ಭಾರೀ ಜೈಕಾರ ಕೇಳಿಬಂತು. ಅಭಿಮಾನಿ ಗುಂಪೊಂದು ರಾಕಿ ಭಾಯ್ ಯಶ್ ಜೊತೆಗೆ ವಿರಾಟ್ ಕೊಹ್ಲಿ ಫೋಟೋ ಇರುವ ಬ್ಯಾನರ್ ಹಿಡಿದು ಚಿಯರ್ ಅಪ್ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ