ಸದ್ಯಕ್ಕಂತೂ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲ್ಲ ಎಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ

ಗುರುವಾರ, 23 ಏಪ್ರಿಲ್ 2020 (10:08 IST)
ಮುಂಬೈ: ಲಾಕ್ ಡೌನ್ ಮುಗಿದ ಮೇಲೆ ಐಪಿಎಲ್ ನಡೆಯಬಹುದು, ಭಾರತ ಆಸ್ಟ್ರೇಲಿಯಾ ಸರಣಿ ನಡೆಯಬಹುದೇ ಎಂಬಿತ್ಯಾದಿ ಲೆಕ್ಕಾಚಾರ ಹಾಕುತ್ತಿದ್ದವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.


ಸದ್ಯಕ್ಕಂತೂ ಭಾರತದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆಯುವ ಪರಿಸ್ಥಿತಿಯಲ್ಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

‘ಮಾನವನ ಜೀವಕ್ಕಿಂತ ಯಾವುದೂ ದೊಡ್ಡದಲ್ಲ. ಕ್ರಿಕೆಟ್ ಗಿಂತ ಆರೋಗ್ಯ ಮುಖ್ಯ. ಸದ್ಯಕ್ಕಂತೂ ಭಾರತದಲ್ಲಿ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆಯಲ್ಲ’ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ