ಲಕ್ನೋ ಫ್ರಾಂಚೈಸಿಯಲ್ಲಿ ಗೌತಮ್ ಗಂಭೀರ್ ಮೆಂಟರ್ ಸ್ಥಾನಕ್ಕೆ ಕುತ್ತು?

ಭಾನುವಾರ, 16 ಜುಲೈ 2023 (08:30 IST)
Photo Courtesy: Twitter
ಲಕ್ನೋ: ಐಪಿಎಲ್ ನ ಲಕ್ನೋ ಫ್ರಾಂಚೈಸಿ ನೂತನ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಅವರನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಣೆ ಹೊರಡಿಸಿದೆ.

ಮುಂದಿನ ಆವೃತ್ತಿಯಿಂದ ಹೊಸ ಸಹಾಯಕ ಸಿಬ್ಬಂದಿಗಳು ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಹೀಗಾದಲ್ಲಿ ಮೆಂಟರ್ ಗೌತಮ್ ಗಂಭೀರ್ ಸ್ಥಾನಕ್ಕೂ ಕುತ್ತು ಬರುವ ಸಾಧ‍್ಯತೆಯಿದೆ.

ಗಂಭೀರ್ ಕಳೆದ ಆವೃತ್ತಿಯಲ್ಲಿ ನಡೆದುಕೊಂಡ ರೀತಿ ಲಕ್ನೋ ಮಾಲಿಕರ ಅಸಮಾಧಾನಕ್ಕೆ ಗುರಿಯಾಗಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಮೆಂಟರ್ ಸ್ಥಾನದಿಂದ ಕಿತ್ತು ಹಾಕುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ