ಐಪಿಎಲ್ ನಲ್ಲಿಂದು ಹೊಸ ತಂಡಗಳ ನಡುವಿನ ಕಾದಾಟ
ತಂಡ ಹೊಸದಾದರೂ ಆಟಗಾರರು ಹಳಬರೇ. ಈ ಹಿಂದೆ ಪಂಜಾಬ್ ತಂಡದ ನಾಯಕರಾಗಿ ಅಷ್ಟೇನೂ ಯಶಸ್ವಿಯಾಗದಿದ್ದರೂ ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಕೆಎಲ್ ರಾಹುಲ್ ಗೆ ಲಕ್ನೋ ನಾಯಕರಾಗಿ ಹೊಸ ಅನುಭವ. ರಾಹುಲ್ ಗೆ ಮನೀಶ್ ಪಾಂಡೆ, ರವಿ ಬಿಷ್ಣೋಯ್ ಮುಂತಾದ ಪ್ರತಿಭಾವಂತರ ಬಲವಿದೆ.
ಇತ್ತ ಗುಜರಾತ್ ಟೈಟನ್ಸ್ ನಾಯಕರಾಗಿ ಹಾರ್ದಿಕ್ ಪಾಂಡ್ಯ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಇದು ಅವರಿಗೆ ನಾಯಕರಾಗಿ ಹೊಸ ಅನುಭವ. ಈ ತಂಡದಲ್ಲಿ ಶುಬ್ನಂ ಗಿಲ್, ಡೇವಿಡ್ ಮಿಲ್ಲರ್, ರಾಹುಲ್ ತೆವಾತಿಯಾ, ಮೊಹಮ್ಮದ್ ಶಮಿ ಮುಂತಾದ ಪ್ರತಿಭಾವಂತರ ಗುಂಪೇ ಇದೆ. ಹೊಸದಾಗಿ ಎಂಟ್ರಿ ಕೊಟ್ಟ ತಂಡಗಳಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂದು ನೋಡಲು ಇಂದು 7.30 ಕ್ಕೆ ಆರಂಭವಾಗಲಿರುವ ಪಂದ್ಯ ವೀಕ್ಷಿಸಬೇಕು.