ಟೀಂ ಇಂಡಿಯಾ ಕ್ರಿಕೆಟಿಗರ ಅರೆನಗ್ನ ಪೋಸ್ಟ್: ಯಾರು ಹಾಟೆಸ್ಟ್ ನೀವೇ ಹೇಳಿ!
ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್ ಸೇರಿದಂತೆ ಕೆಲವು ಕ್ರಿಕೆಟಿಗರ ಗುಂಪು ಬಾರ್ಬಡೋಸ್ ನ ಕಡಲ ಕಿನಾರೆಯಲ್ಲಿ ಅರೆನಗ್ನರಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಹಾರ್ದಿಕ್ ಗ್ಯಾಂಗ್ ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರ ಅರೆನಗ್ನ ಪೋಸ್ ಗೆ ಹಲವು ರೀತಿಯ ಕಾಮೆಂಟ್ ಗಳು ಬಂದಿವೆ. ಕೆಲವರು ಈ ಫೋಟೋದಲ್ಲಿ ಕುಲದೀಪ್ ಯಾದವ್ ಪ್ಯಾಂಟ್ ಹಾಕಲು ಮರೆತರೇ ಎಂದು ಕಾಲೆಳೆದಿದ್ದಾರೆ. ಇನ್ನು ಕೆಲವರು ಹಾರ್ದಿಕ್ ಪಾಂಡ್ಯ ಎಲ್ಲರಿಗಿಂತ ಹಾಟ್ ಎಂದಿದ್ದಾರೆ.