ಟೀಂ ಇಂಡಿಯಾ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ಖಾಯಂ ನಾಯಕ? ರೋಹಿತ್ ಗೆ ಸಂದೇಶ?

ಗುರುವಾರ, 24 ನವೆಂಬರ್ 2022 (09:30 IST)
Photo Courtesy: Twitter
ಮುಂಬೈ: ಟಿ20 ವಿಶ್ವಕಪ್ ನಲ್ಲಿ ಸೋತ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ತೀವ್ರ ಟೀಕೆ ಕೇಳಿಬರುತ್ತಿತ್ತು. ಇದೀಗ ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯರನ್ನೇ ನಾಯಕರಾಗಿಸಲು ಬಿಸಿಸಿಐ ತೀರ್ಮಾನಿಸಿದೆಯಂತೆ.

ಅದಕ್ಕೆ ತಕ್ಕಂತೆ ಈಗ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಹಾರ್ದಿಕ್ ನೇತೃತ್ವದಲ್ಲಿ ಟೀಂ ಇಂಡಿಯಾ ಯುವ ಪಡೆ ಗೆದ್ದುಕೊಂಡಿದೆ. ಹೀಗಾಗಿ ಬಿಸಿಸಿಐ ಟಿ20 ಗೆ ಅವರನ್ನೇ ನಾಯಕನಾಗಿಸುವ ತೀರ್ಮಾನ ಗಟ್ಟಿಗೊಳಿಸಿದೆ.

ಈ ವಿಚಾರವನ್ನು ರೋಹಿತ್ ಶರ್ಮಾ ಗಮನಕ್ಕೂ ತರಲಾಗಿದೆ ಎಂಬ ಸುದ್ದಿಯಿದೆ. ಈ ಪ್ರಸ್ತಾವನೆಗೆ ರೋಹಿತ್ ಕೂಡಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಿ20 ತಂಡಗಳಲ್ಲಿ ರೋಹಿತ್ ನಾಯಕರಾಗುವುದು ಅನುಮಾನ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ